ದೆಹಲಿ:ದೇಶದಲ್ಲಿ ಸಂಭವಿಸುತ್ತಿರುವ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ತೀವ್ರ ಆತಂಕವನ್ನು ಸೃಷ್ಟಿಸಿವೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆಯ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸತ್ತ ಪ್ರಕರಣ ವರದಿಯಾಗುತ್ತಿದ್ದು, ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇದನ್ನೂ ಓದಿ:ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ಫಲಿಸಲಿಲ್ಲ ಜೀವ ಉಳಿಸಿಕೊಳ್ಳುವ ಪ್ರಯತ್ನ
ಈ ಮಧ್ಯೆ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಫ್ರೆಂಡ್​ ಜತೆ ಮಾತನಾಡುತ್ತಿರುವಾಗ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸತ್ತ ಪ್ರಕರಣ ನಡೆದಿದೆ. ಪುಣೆಯ ಇಂದಪುರದಲ್ಲಿ ಈ ಸಾವು ಸಂಭವಿಸಿದೆ. ಇಂದಪುರದ ನಾರಾಯಣದಾಸ್ ರಾಮದಾಸ್ ಹೈಸ್ಕೂಲ್​ನ ಹತ್ತನೇ ತರಗತಿಯ ಸೃಷ್ಟಿ ಏಕದ್​ (16) ಸಾವಿಗೀಡಾದ ವಿದ್ಯಾರ್ಥಿನಿ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಮಾ. 13ರಂದು ಈಕೆಯ ಕೊನೆಯ ಪರೀಕ್ಷೆ ಮುಗಿದಿರುತ್ತಿತ್ತು. ದುರದೃಷ್ಟವೆಂದರೆ ಅದಕ್ಕೂ ಒಂದು ದಿನ ಮೊದಲೇ ಈಕೆಯ ಬದುಕೇ ಕೊನೆಯಾಗಿದೆ. ಮಾ. 12ರಂದು ಈಕೆ ಫ್ರೆಂಡ್​ ಜತೆ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದಳು. ಕೂಡಲೇ ಈಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಆಗಲಿಲ್ಲ.
ಇದನ್ನೂ ಓದಿ:ಕಬಡ್ಡಿ ಆಡುವಾಗ ಹೃದಯಾಘಾತ: ಸ್ನೇಹಿತರ ಎದುರಲ್ಲೇ ಕುಸಿದು ಬಿದ್ದು ದುರಂತ ಅಂತ್ಯ ಕಂಡ ಯುವಕ!
ಕಳೆದ ವಾರ ಪುಣೆಯ ಮರುಂಜಿ ಎಂಬಲ್ಲಿ ಕುಸ್ತಿಪಟು ಸ್ವಪ್ನಿಲ್ ಪಡಾಲೆ ಕಸರತ್ತು ನಡೆಸುತ್ತಿರುವಾಗಲೇ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಸತ್ತಿರುವುದಾಗಿ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ.
ಮೊಬೈಲ್​ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ; ಕೊರಿಯರ್​ನಲ್ಲಿ ಫೋನ್​ ವಾಪಸ್!

ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + six =
Remember me
