ಲಂಡನ್: ಜಗತ್ತಿನ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಯೂನಿವರ್ಸಿಟಿಗಳಿಗೆ ಸಂಬಂಧಿಸಿದ ಟೈಮ್ಸ್ ಹೈಯರ್​ ಎಜುಕೇಶನ್ ಪ್ರತಿ ವರ್ಷದಂತೆ ಈ ವರ್ಷವೂ ಎಮರ್ಜಿಂಗ್ ಎಕಾನಮೀಸ್ ಯೂನಿವರ್ಸಿಟಿ ರಾಂಕಿಂಗ್ಸ್ ಪ್ರಕಟಿಸಿದೆ. ಟಾಪ್ 100 ಯೂನಿವರ್ಸಿಟಿಗಳ ಪಟ್ಟಿಯಲ್ಲಿ ಭಾರತದ 11 ಯೂನಿವರ್ಸಿಟಿಗಳು ಸ್ಥಾನ ಪಡೆದುಕೊಂಡಿವೆ.
ಈ ಪಟ್ಟಿಯಲ್ಲಿ ಟಾಪ್ 100ರ ಪೈಕಿ ಮೂವತ್ತು ವಿವಿಗಳು ಚೀನಾದ್ದೇ ಆಗಿವೆ. ಒಟ್ಟು 47 ರಾಷ್ಟ್ರಗಳ 533 ವಿವಿಗಳನ್ನು ಈ ಪಟ್ಟಿಗೆ ಪರಿಗಣಿಸಲಾಗಿದೆ. ಇದರಲ್ಲಿ ಭಾರತದ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ 16ನೇ ರಾಂಕ್​ ಪಡೆದಿದೆ. ಇನ್ನುಳಿದಂತೆ ಐಐಟಿಗಳು ನಂತರದ ಸ್ಥಾನದಲ್ಲಿವೆ ಎಂದು ಟೈಮ್ಸ್ ಹೈಯರ್ ಎಜುಕೇಶನ್​ನ ಚೀಫ್ ನಾಲೆಜ್​ ಆಫೀಸರ್ ಫಿಲ್ ಬಾಟಿ ತಿಳಿಸಿದ್ದಾರೆ.
ಭಾರತದ ಶಿಕ್ಷಣ ಸಂಸ್ಥೆಗಳ ಪ್ರಗತಿ ಈ ವರ್ಷ ಹೆಚ್ಚು ಆಶಾದಾಯಕವಾಗಿ ಕಾಣಿಸಿದೆ. ಭಾರತ ಸರ್ಕಾರ 2017ರಲ್ಲಿ ಇನ್​ಸ್ಟಿಟ್ಯೂಟ್ಸ್ ಆಫ್ ಎಮಿನೆನ್ಸ್ ಸ್ಕೀಮ್​ ಆರಂಭಿಸಿದ್ದು, ಈ ಪಟ್ಟಿಯಲ್ಲಿರುವ ಅಮೃತಾ ವಿಶ್ವ ವಿದ್ಯಾಪೀಠಂ ಇದೇ ಮೊದಲ ಬಾರಿಗೆ ಟಾಪ್ 100ರ ಪಟ್ಟಿಯೊಳಗೆ ಸೇರಿದೆ. 2019ರಲ್ಲಿ ಈ ಸಂಸ್ಥೆ 141ನೇ ಸ್ಥಾನದಲ್ಲಿತ್ತು. ಈ ವರ್ಷ 51 ಸ್ಥಾನ ಮೇಲಕ್ಕೇರಿ ಉತ್ತಮ ಸಾಧನೆ ತೋರಿದೆ ಎಂದು ಬಾಟಿ ತಿಳಿಸಿದರು.
ಇನ್ನುಳಿದಂತೆ ಐಐಟಿ ಖರಗಪುರ 23 ಸ್ಥಾನ ಮೇಲಕ್ಕೇರಿದ್ದು 32ನೇ ಸ್ಥಾನದಲ್ಲಿ, ಐಐಟಿ ದೆಹಲಿ 28 ಸ್ಥಾನ ಮೇಲಕ್ಕೇರಿ 38ನೇ ಸ್ಥಾನಕ್ಕೆ, ಐಐಟಿ ಮದ್ರಾಸ್ 12 ಸ್ಥಾನ ಮೇಲಕ್ಕೇರಿ 63ನೇ ಸ್ಥಾನದಲ್ಲಿದೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂಪಾರ್, ಇನ್​ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಇದೇ ಮೊದಲ ಬಾರಿಗೆ ಪಟ್ಟಿ ಪ್ರವೇಶಿಸಿದ್ದು, ಎರಡೂ ಟಾಪ್ 100ರೊಳಗೆ ಸ್ಥಾನ ಪಡೆದಿವೆ ಎಂದು ಬಾಟಿ ಹೇಳಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 16 =
Remember me
