ಜೋಧ್​ಪುರ:ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಹಿಂದು ಕುಟುಂಬವೊಂದರ 11 ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ಪಾಕ್​ನಿಂದ ವಲಸೆ ಬಂದಿದ್ದ ಇವರು ರಾಜಸ್ಥಾನದ ಜೋಧ್​ಪುರ ಜಿಲ್ಲೆಯ ಫಾರ್ಮ್​ ಹೌಸ್​ನಲ್ಲಿ ನೆಲೆಸಿದ್ದರು. ಭಾನುವಾರ ಬೆಳಗ್ಗೆ ಇವರೆಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಆದರೆ ಈ ಕುಟುಂಬದ ಸದಸ್ಯನೊಬ್ಬ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದು, ಇವರೆಲ್ಲರೂ ಉಳಿದುಕೊಂಡಿದ್ದ ಡೆಚು ಪ್ರದೇಶದ ಲೋಡ್ತಾ ಗ್ರಾಮದಲ್ಲಿ ಗುಡಿಸಿಲಿನ ಹೊರಗೆ ಈತ ಕುಳಿತಿದ್ದ ಎನ್ನಲಾಗಿದೆ.
ಆತನನ್ನು ವಿಚಾರಿಸಿದಾಗ ಏನಾಯಿತು, ಹೇಗಾಯಿತು ಎಂಬುದು ನನಗೂ ಗೊತ್ತಿಲ್ಲ. ಬಹುಶಃ ರಾತ್ರಿ ವೇಳೆ ಏನೋ ಆಗಿರಬೇಕು ಎಂದಷ್ಟೇ ಹೇಳಿದ ಎಂದು ಜೋಧ್​ಪುರದ ಎಸ್​ಪಿ (ಗ್ರಾಮಾಂತರ) ರಾಹುಲ್​ ಭರತ್​ ತಿಳಿಸಿದ್ದಾರೆ.
ಇದನ್ನೂ ಓದಿ:ಸುಶಾಂತ್​ ಸಹೋದರಿಯ ಎಫ್​ಡಿಯಿಂದ 2.63 ಕೋಟಿ ರೂ. ಸಿಎಗೆ ವರ್ಗಾವಣೆ, ಇಡಿ ವಿಚಾರಣೆಯಲ್ಲಿ ಬಾಯ್ಬಿಟ್ಟ ರಿಯಾ
ಇವರು ಇದ್ದ ಗುಡಿಸಿಲಿನ ಸುತ್ತ ಯಾವುದೋ ರಾಸಾಯನಿಕದ ವಾಸನೆ ಬರುತ್ತಿದೆ. ಹಾಗಾಗಿ ಇವರೆಲ್ಲರೂ ಒಟ್ಟಾಗಿ ಯಾವುದೋ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಮೇಲ್ನೋಟಕ್ಕೆ ತೋರುತ್ತಿದೆ. ಆದರೂ ಇವರ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ಇವರೆಲ್ಲರೂ ಪಾಕ್​ನಿಂದ ವಲಸೆ ಬಂದ ಹಿಂದುಗಳಾಗಿದ್ದರು. ಭಿಲ್​ ಸಮುದಾಯಕ್ಕೆ ಸೇರಿದವರಾಗಿದ್ದರು. ಹೊಟ್ಟೆಪಾಡಿಗಾಗಿ ಇವರು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅದಕ್ಕಾಗಿ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದುಕೊಂಡಿದ್ದರು. ಇವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಾಣಿಸುತ್ತಿಲ್ಲ. ಹಾಗಾಗಿ ಇದು ಯಾರೋ ಎಸಗಿದ ದುಷ್ಕೃತ್ಯ ಅಲ್ಲ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ. ಆದರೂ ನಾವು ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಶ್ವಾನಪಡೆಯ ನೆರವು ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯ ವೇಳೆ ಕುಟುಂಬದಲ್ಲಿ ಯಾವುದೋ ವಿಷಯಕ್ಕೆ ಭಿನ್ನಾಭಿಪ್ರಾಯ ಇತ್ತು ಎಂಬುದು ಗೊತ್ತಾಗಿದೆ. ಇದೀಗ ಬದುಕುಳಿದಿರುವ ಆ ಕುಟುಂಬದ ಏಕೈಕ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಏನಾದರೂ ಮಾಹಿತಿ ಸಿಗಬಹುದು ಎಂದು ತಿಳಿಸಿದ್ದಾರೆ.
ಕರೊನಾ ಲಸಿಕೆ, ಖರೀದಿ, ವಿತರಣೆ ನಿರ್ಧರಿಸಲಿದೆ ಈ ಸಮಿತಿ; ಕೇಂದ್ರೀಯ ಟಾಸ್ಕ್​ಪೋರ್ಸ್​ ರಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
