ಪಾಲಕ್ಕಾಡ್​​: ಕೇವಲ ಹನ್ನೊಂದು ತಿಂಗಳ ಮಗುವೊಂದು ಬಕೆಟ್​ ನೀರಿನೊಳಕ್ಕೆ ಬಿದ್ದು ಉಸಿರುಗಟ್ಟಿ ಮೃತಪಟ್ಟ ಘಟನೆ ಕೇರಳದ ಪಾಲಕ್ಕಾಡ್ ಸಮೀಪದ ಚಲಸ್ಸೇರಿ ಎಂಬಲ್ಲಿ ನಡೆದಿದೆ. ಪಾಲಕರ ಕ್ವಾರಂಟೈನ್ ಕಾಲದಲ್ಲಿ ಬಂದರೆಗಿದ ಆಪತ್ತು ಇದು. ಮಗುವಿನ ಹೆಸರು ಮೊಹಮ್ಮದ್ ಇಸ್​ಖಾನ್. ಚಲಸ್ಸೇರಿ ನಿವಾಸಿ ಸಾದಿಕ್​ ಎಂಬುವವರ ಪುತ್ರ.
ಇದನ್ನೂ ಓದಿ:ಬಾಲಿವುಡ್​ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ
ಸಾದಿಕ್ ಅವರ ಆಪ್ತ ಸಂಬಂಧಿಕರಿಗೆ ಕರೊನಾ ವೈರಸ್​ ಪಾಸಿಟಿವ್ ಆದ ಕಾರಣ, ಸಾದಿಕ್ ಮತ್ತು ಆತನ ಪತ್ನಿಗೆ ಕ್ವಾರಂಟೈನ್ ಕೂರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ತಮ್ಮ 11 ತಿಂಗಳ ಮಗುವನ್ನು ಹತ್ತಿರದ ಸಂಬಂಧಿಕರ ಬಳಿ ಬಿಟ್ಟಿದ್ದರು.
ಇದನ್ನೂ ಓದಿ:ಬಾಲಿವುಡ್​ ನಟ ಅರ್ಷದ್​ ವಾರ್ಸಿ ಚಾಲಕರಾಗಿ ಕೆಲಸ ಮಾಡಿದ್ದ ಬಿಗ್​ ಬಿ ಪುತ್ರ ಅಭಿಷೇಕ್​ ಬಚ್ಚನ್​
ಶನಿವಾರ ರಾತ್ರಿ ಬಾತ್​ರೂಮ್​ನಲ್ಲಿ ತುಂಬಿಟ್ಟಿದ್ದ ಬಕೆಟ್​ ನೀರಿನೊಳಕ್ಕೆ ಮಗು ಬಿದ್ದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಮಗುವಿನ ಪ್ರಾಣ ಉಳಿಸುವುದು ಸಾಧ್ಯವಾಗಿಲ್ಲ.ಮಗುವಿನ ಮೃತದೇಹವನ್ನು ಬಳಿಕ ಖಾಸಗಿ ಆಸ್ಪತ್ರೆಯಿಂದ ತ್ರಿಶ್ಶೂರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಿದ್ದು ಕೋವಿಡ್ 19 ಟೆಸ್ಟ್​ಗೆ ಒಳಪಡಿಸಲಾಗಿದೆ. ಇದರ ಫಲಿತಾಂಶ ಇನ್ನೂ ಬಂದಿಲ್ಲ. ಚಲಸ್ಸೇರಿ ಪೊಲೀಸ್​ ಠಾಣೆಯ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಅಡುಗೆ ಸಿಲಿಂಡರ್ ಸ್ಪೋಟ: ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
