ಪಟನಾ:ಮದುವೆಯಾಗುವ ವಧು ವರರ ಕುಟುಂಬದ ನಡುವೆ ಯಾವ್ಯಾವುದೋ ಕಾರಣಕ್ಕೆ ಜಗಳವಾಗುವುದನ್ನು ನೋಡಿರುತ್ತೀರಿ. ಆದರೆ ಊಟದಲ್ಲಿ ಬಡಿಸಲಾಗುವ ಮೀನಿನ ತಲೆಗಾಗಿ ಹೊಡೆದಾಟ ಆಗುತ್ತದೆ ಎಂದರೆ ನಂಬುತ್ತೀರಾ?
ಹೌದು. ಇಂತದ್ದೊಂದು ವಿಚಿತ್ರ ಘಟನೆ ಬಿಹಾರದ ಗೋಪಾಲ್​ಗಂಜ್ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವರನ ಮನೆಗೆ ದಿಬ್ಬಣ ತಂದು ಮದುವೆ ಮಾಡಿದ್ದ ವಧುವಿಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಊಟಕ್ಕೆಂದು ಕುಳಿತಿದ್ದರು. ಭರ್ಜರಿ ಬಾಡೂಟವೂ ನಡೆಯುತ್ತಿತ್ತು. ಈ ವೇಳೆ ವಧುವಿನ ಕಡೆಯ ವ್ಯಕ್ತಿಯೊಬ್ಬ ಮೀನಿನ ತಲೆ ತಂದು ಹಾಕುವಂತೆ ಕೇಳಿದ್ದಾನೆ. ಆದರೆ ವರನ ಕಡೆಯಿಂದ ಊಟ ಬಡಿಸುವ ಕೆಲಸದಲ್ಲಿ ತೊಡಗಿಸಿಕೊಂಡವರು ಅದನ್ನು ತಂದು ಹಾಕುವುದಕ್ಕೆ ತಡವಾಗಿದೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿ ಕೋಲು, ಕಬ್ಬಿಣದ ರಾಡಿನಿಂದಲೂ ಹೊಡೆದಾಡಿಕೊಂಡಿದ್ದಾರೆ.
ಈ ಹೊಡೆದಾಟದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯ 11 ಜನರಿಗೆ ಗಾಯವಾಗಿದೆ. ಅನೇಕರ ತಲೆ, ಕೈ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ 11 ಮಂದಿಯನ್ನೂ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್)
ಪೊಲೀಸರ ಬೈಕಿಗೇ ಇಲ್ಲ ರಕ್ಷಣೆ: ಠಾಣೆ ಮುಂದೆ ನಿಲ್ಲಿಸಿದ್ದ ಬೈಕನ್ನೇ ಹೊತ್ತೊಯ್ದ ಕಳ್ಳರು

ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
