ಕೊಚ್ಚಿ:ಮಂಗಳವಾರ ಬೆಳಗ್ಗೆ ಕೊಚ್ಚಿಯ ಅಲುವಾ ಮಣಪ್ಪುರಂ ಪ್ರದೇಶದಲ್ಲಿ ತರಬೇತುದಾರ ಸಾಜಿ ವಾಲಸ್ಸೆರಿಲ್​ ಅವರು ಕೈಗೊಂಡಿದ್ದ ಸ್ವಿಮ್ಮಿಂಗ್​ ತರಗತಿಯನ್ನು ವೀಕ್ಷಿಸಲು ಸಾಕಷ್ಟು ಮಂದಿ ನೆರೆದಿದ್ದರು. ಎಲ್ಲರ ಮುಖದಲ್ಲೂ ಒಂದು ರೀತಿಯ ಉತ್ಸಾಹದ ಚಿಲುಮೆ ಆ ಕ್ಷಣಕ್ಕೆ ಆವರಿಸಿತ್ತು. ಅದಕ್ಕೆ ಕಾರಣ ಓರ್ವ ಅಂಧ ವಿದ್ಯಾರ್ಥಿ ಎಂದರೆ ನೀವು ನಂಬಲೇಬೇಕು.
ಅಂಧ ಶಾಲೆಯ ವಿದ್ಯಾರ್ಥಿಯಾದ 11 ವರ್ಷದ ಮನೋಜ್​ ಸಾಹಸವನ್ನು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ತುಂಬಿದ್ದರು. ಹುಟ್ಟಿನಿಂದಲೇ ಕುರುಡನಾಗಿರುವ ಮನೋಜ್​, ಅದ್ವೈತ್​ ಆಶ್ರಮದಿಂದ ಅಲುವಾ ಮಣಪ್ಪುರಂವರೆಗೆ ಇರುವ ಪರಿಯಾರ್​ ನದಿಯನ್ನು ಅಡ್ಡಲಾಗಿ ಈಜಲು ಸಿದ್ಧತೆ ಮಾಡಿಕೊಂಡಿದ್ದ.
ಅಂಧನಾಗಿದ್ದರೂ ನಾನಿದನ್ನು ಸಾಧಿಸುತ್ತೇನೆ ಎಂದು ಬಲವಾದ ನಂಬಿಕೆ ಮನೋಜ್​ ಮುಖದಲ್ಲಿ ಕಾಣುತ್ತಿತ್ತು. ಅಲ್ಲದೇ ತನ್ನ ಸಾಹಸದ ಬಗ್ಗೆ ಮಾತನಾಡಿದ ಮನೋಜ್​, ಮೊದಲ ಬಾರಿಗೆ ಪರಿಯಾರ್​ ನದಿ ಸುತ್ತ ಈಜಾಡಿದ ನವನೀತ್​ ಎಂಬ ಹಿರಿಯ ಅಂಧ ವಿದ್ಯಾರ್ಥಿಯೇ ನನಗೆ ಸ್ಪೂರ್ತಿ ಎಂದು ಹೇಳಿದ್ದಾನೆ. ನವನೀತ್​ ಕೂಡ ಸಾಜಿ ಅವರ ವಿದ್ಯಾರ್ಥಿಯೇ. ಮನೋಜ್​ ಕೂಡ ಒಂದು ತಿಂಗಳಿನಿಂದ ಸಾಜಿ ಬಳಿ ತರಬೇತಿ ಪಡೆದಿದ್ದಾನೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ಅದ್ವೈತ ಆಶ್ರಮದ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದ ಸ್ವಾಮಿಕಲ್​ ಎಂಬುವರು ಸಾಹಸ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಮನೋಜ್​ಗೆ ಶಿಕ್ಷಕರು ಮತ್ತು ಸ್ನೇಹಿತರು ಹಾಗೂ ಪ್ರೇಕ್ಷಕರು ಗುರಿ ತಲುಪಲು ಚಿಯರ್​ ಅಪ್​ ಮಾಡಿದರು. ಶಾಲೆಯ ಬ್ಯಾಂಡ್​ ತಂಡವು ಕೂಡ ನಿರಂತರವಾಗಿ ನುಡಿಸುವ ಮೂಲಕ ಚಿಯರ್​ ಅಪ್​ ಮಾಡಿದರು. ಅಂತಿಮವಾಗಿ ಮನೋಜ್​ 8:45ಕ್ಕೆ ಗುರಿಯನ್ನು ಮುಟ್ಟಿದರು. ಬಳಿಕ ಮನೋಜ್​​ನನ್ನು ಚಿಯರ್​ ಸಪ್​ ಮೂಲಕವೇ ಬರಮಾಡಿಕೊಂಡರು.
ಹುಟ್ಟಿನಿಂದ ಅಂಧನಾದ ಮನೋಜ್​ ಸಾಹಸ ಕಾರ್ಯವನ್ನು ಎಲ್ಲರು ಕೊಂಡಾಡಿ ಬೆನ್ನುತಟ್ಟಿದರು. ಆತನ ಆತ್ಮಸ್ಥೈರ್ಯಕ್ಕೆ ಎಲ್ಲರೂ ಸಲಾಂ ಹೊಡೆದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 16 =
Remember me
