ಗಾಜಿಯಾಬಾದ್​:ನಗರದಲ್ಲಿ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, 11 ವರ್ಷದ ಬಾಲಕಿ ಮೇಲೆ ಆಕೆಯ ತಾಯಿಯ ಬಾಯ್​ಫ್ರೆಂಡ್​ ಅತ್ಯಾಚಾರ ಎಸಗಿದ್ದಾನೆ. ತನ್ನ ಸ್ನೇಹಿತ ಮಾಡಿದ ತಪ್ಪನ್ನು ಮುಚ್ಚಿಹಾಕುಲು ಜನ್ಮಕೊಟ್ಟ ತಾಯಿಯೇ ಸಾಥ್ ನೀಡಿರುವುದು ಮಗುವಿನ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರಿದ್ದು, ತಾಯಿಯ ಚಿತ್ರಹಿಂಸೆ ತಾಳಲಾರದೆ ಬಾಲಕಿ, ಮನನೊಂದು ಮನೆಯಿಂದ ಪರಾರಿಯಾದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ವಿಜಯವಾಣಿಯ ಈ ದಿನದ ಪ್ರಮುಖ ಸುದ್ದಿಗಳು- 12/04/2024
ಬಾಲಕಿಯ ಮೇಲೆ ಮಹಿಳೆಯ ಸ್ನೇಹಿತ ಅತ್ಯಾಚಾರ ಎಸಗಿದ್ದು, ಆಕೆಯ ಸಹೋದರನ (14) ಮೇಲೆಯೂ ಇದೇ ರೀತಿಯ ನೀಚ ಕೃತ್ಯ ಎಸಗಿದ್ದಾನೆ. ಮಗಳ ಮೇಲಿನ ಅತ್ಯಾಚಾರದ ಘಟನೆಯನ್ನು ಯಾರಿಗೂ ಹೇಳದಂತೆ ಮುಚ್ಚಿಹಾಕುಲು ತಾಯಿಯೇ ಪುತ್ರಿಗೆ ನಿರಂತರವಾಗಿ ಚಿತ್ರಹಿಂಸೆ ನೀಡಿದ್ದಾಳೆ. ಈ ಕಿರುಕುಳ ತಾಳಲಾರದ ಬಾಲಕಿ ಏಕಾಏಕಿ ಮನೆಬಿಟ್ಟು ಹೋಗಿದ್ದು, ದೆಹಲಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಬಾಲಕಿ ಮನೆಯಿಂದ ತಪ್ಪಿಸಿಕೊಂಡು ದೆಹಲಿ ತಲುಪಿರುವುದು ಪೊಲೀಸರ ಕಾರ್ಯಾಚರಣೆಯಲ್ಲಿ ತಿಳಿದುಬಂದಿದೆ. ನಿರ್ಜನ ರಸ್ತೆಯಲ್ಲಿ ಆಕೆಯನ್ನು ಕಂಡ ದೆಹಲಿ ಪೊಲೀಸರು, ಬಾಲಕಿಯ ಸ್ಥಿತಿ ಕಂಡು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ತದನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಬಾಲಕಿಯನ್ನು ವಿಚಾರಣೆ ಮಾಡಿದ ಪೊಲೀಸರಿಗೆ ಆಘಾತಕಾರಿ ಸಂಗತಿ ಗೊತ್ತಾಗಿದೆ. ಇದರ ಬೆನ್ನಲ್ಲೇ ಘಟನೆಗೆ ಕಾರಣರಾದ ಆಕೆಯ ತಾಯಿ ಮತ್ತು ಲವರ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಡಿಕೆಶಿಗೆ ರೈತನ ಸವಾಲ್! ಮೋದಿ ದೇಶದ ಪ್ರಧಾನಿ ಆಗದಿದ್ರೆ, ನಿಮ್ಮ ಚಪ್ಪಲಿ ನನ್ನ ತಲೆಮೇಲಿಟ್ಟು ಇಡೀ…
ಶಾಕಿಂಗ್ ಸಂಗತಿ ಎಂದರೆ ಆತ ನನ್ನ ಮೇಲೆ ಅತ್ಯಾಚಾರ ಮಾಡಿದ ಎಂದು ಹೇಳಿದಾಗ, ರಕ್ಷಣೆ ನೀಡಬೇಕಾದ ತಾಯಿಯೇ ಮಗಳಿಗೆ ಬೆದರಿಕೆಯೊಡ್ಡಿ, ಇದನ್ನು ಯಾರಿಗೆ ಹೇಳದಂತೆ ಚಿತ್ರಹಿಂಸೆ ನೀಡಿರುವುದು ಕ್ರೌರ್ಯತನಕ್ಕೆ ಸಾಕ್ಷಿಯಾಗಿದೆ. ಘಟನೆ ಪರಿಶೀಲಿಸಿದ ದೆಹಲಿ ಪೊಲೀಸರು ಏಪ್ರಿಲ್ 9ರಂದು ಎಫ್ಐಆರ್ ದಾಖಲಿಸಿದ್ದು, ಲೋನಿ ಪೊಲೀಸರಿಗೆ ಕೇಸ್​ ವರ್ಗಾಯಿಸಿದ್ದಾರೆ,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಡಿಕೆಶಿಗೆ ರೈತನ ಸವಾಲ್! ಮೋದಿ ದೇಶದ ಪ್ರಧಾನಿ ಆಗದಿದ್ರೆ, ನಿಮ್ಮ ಚಪ್ಪಲಿ ನನ್ನ ತಲೆಮೇಲಿಟ್ಟು ಇಡೀ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
