ಚೀನಾ:ತಂದೆಯೊಬ್ಬರು ತಮ್ಮ 11 ವರ್ಷದ ಮಗನಿಗೆ ಸತತ17 ಗಂಟೆಗಳ ಕಾಲ ವಿಡಿಯೋ ಗೇಮ್ ಆಡುವ ಶಿಕ್ಷೆ ವಿಧಿಸಿದ್ದಾರೆ. ಇದಕ್ಕೆ ಕಾರಣ ತನ್ನ ಮಗ ರಾತ್ರಿ ಹೊತ್ತಿನಲ್ಲಿ ನಿದ್ರಿಸದೆ, ವಿಡಿಯೋ ಗೇಮ್ ಆಡುತ್ತಾ ಸಿಕ್ಕಿಬಿದ್ದಿರುವುದು.
ಚೀನಾದ ಶೆನ್​ಜೆನ್​ನ ವಿದ್ಯಾರ್ಥಿಯೊಬ್ಬ ರಾತ್ರಿ 1 ಗಂಟೆ ವೇಳೆ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದ ಸಿಟ್ಟಾದ ಹುವಾಂಗ್, ತನ್ನ ಮಗನಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಬಾಲಕ ಕ್ಷಮೆ ಕೇಳಿದರೂ ತಂದೆ ಮಾತ್ರ ತನ್ನ ನಿರ್ಧಾರವನ್ನು ಬದಲಿಸಿಲ್ಲ.
ಇದನ್ನೂ ಓದಿ:ಕಾಂಗ್ರೆಸ್​ನಿಂದ ನಾಲ್ಕನೇ ಗ್ಯಾರಂಟಿ ಯೋಜನೆ ಘೋಷಣೆ; 3,000 ರೂ. ನಿರುದ್ಯೋಗ ಭತ್ಯೆ
ತನ್ನ ಮಗನಿಗೆ ಕಠಿಣ ಶಿಕ್ಷೆ ನೀಡಿರುವುದನ್ನು ಹುವಾಂಗ್ ಮೊಬೈಲ್​ನಲ್ಲಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಬಾಲಕ ವಿಡಿಯೋ ಗೇಮ್ ಆಡುತ್ತಿರುವುದನ್ನು ಕಾಣಬಹುದು. ವರದಿಯ ಪ್ರಕಾರ ಬಾಲಕ ಶಿಕ್ಷೆಯನ್ನು ಪೂರ್ಣಗೊಳಿಸಿ, ತಂದೆಗೆ ತನ್ನ ತಪ್ಪಿನ ಬಗ್ಗೆ ಪತ್ರ ಬರೆದಿದ್ದಾನೆ. ತನ್ನ ಟಿಪ್ಪಣಿಯಲ್ಲಿ “ನಾನು ಇನ್ನು ಮುಂದೆ ರಾತ್ರಿ 11 ಗಂಟೆಯ ಮೊದಲು ನಿದ್ರಿಸುತ್ತೇನೆ. ಮಲಗುವ ಮೊದಲು ಮೊಬೈಲ್​ನಲ್ಲಿ ಗೇಮ್ ಆಡುವುದಿಲ್ಲ ಎಂದು ಉಲ್ಲೇಖಿಸಿದ್ದಾನೆ. ಬಳಿಕ ತಂದೆ ಮಗನ ಮನವಿಗೆ ಒಪ್ಪಿಕೊಂಡು ಕಠಿಣ ಶಿಕ್ಷೆಯನ್ನು ರದ್ದುಗೊಳಿಸಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಕಲಬುರಗಿ | ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲೇ ಪ್ರಾಣಬಿಟ್ಟ ಹೆಡ್​​ ಕಾನ್​​ಸ್ಟೇಬಲ್
ಬಾಲಕ ವಿಡಿಯೋ ಗೇಮಿಂಗ್​ನಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ತಂದೆಯ ಕ್ರಮಕ್ಕೆ ಟೀಕೆಗಳು ವ್ಯಕ್ತವಾಗಿವೆ. ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ತಿಳಿಸಿ, ಬುದ್ದಿ ಹೇಳಬೇಕು. ಬದಲಾಗಿ ಇಂತಹ ಶಿಕ್ಷೆ ನೀಡುವುದು ಸರಿಯಲ್ಲ. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.(ಏಜೆನ್ಸೀಸ್)
ಇದನ್ನೂ ಓದಿ:ಬೆಂಗಳೂರಿನ ಈ ವ್ಯಕ್ತಿ ಹಗಲು ಆಟೋ ಚಾಲಕ; ರಾತ್ರಿ ಹಣಕಾಸು ಸಲಹೆಗಾರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
