ನವದೆಹಲಿ:ನಿರ್ಮಾಣ ವಲಯಕ್ಕೆ ಸಂಬಂಧಿಸಿದ ಸರ್ಕಾರಿ ಕಂಪನಿಯಾದ ಎನ್‌ಬಿಸಿಸಿ (National Buildings Construction Corporation (ಇಂಡಿಯಾ) ಲಿಮಿಟೆಡ್​ ಷೇರುಗಳು ಸತತ ಎಂಟನೇ ವಹಿವಾಟಿನ ದಿನ ಏರಿಕೆ ಕಂಡಿವೆ.
ಸೋಮವಾರದ ಇಂಟ್ರಾ ಡೇ ವಹಿವಾಟಿನ ವೇಳೆ ಷೇರಿನ ಬೆಲೆಯಲ್ಲಿ ಶೇ. 5ರಷ್ಟು ಏರಿಕೆಯಾಗಿತ್ತು. ನಂತರ ಲಾಭ ಮಾಡಿಕೊಳ್ಳಲು ಹೂಡಿಕೆದಾರರು ಮಾರಾಟ ಮಾಡಿದ್ದರಿಂದ ದಿನದ ಕೊನೆಯಲ್ಲಿ 1.51% ಕುಸಿದು 166.10 ರೂ.ಗೆ ತಲುಪಿತು. ಫೆಬ್ರವರಿ 1 ಮತ್ತು ಫೆಬ್ರವರಿ 2 ರಂದು, ಈ ಸ್ಟಾಕ್ 10% ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿತ್ತು.
NBCC (ಭಾರತ) ಷೇರು ಹೂಡಿಕೆದಾರರಿಗೆ ಸತತವಾಗಿ ಮಲ್ಟಿಬ್ಯಾಗರ್ (ಅನೇಕ ಪಟ್ಟು) ರಿಟರ್ನ್ಸ್ ನೀಡಿದೆ. ಹೂಡಿಕೆದಾರರು ಒಂದು ತಿಂಗಳಲ್ಲಿ 111.23% ಮಲ್ಟಿಬ್ಯಾಗರ್ ಲಾಭವನ್ನು ಪಡೆದಿದ್ದಾರೆ. ಕೊನೆಯ ಆರುತಿಂಗಳುಗಳಲ್ಲಿ 284% ಮತ್ತು ಕಳೆದ ಒಂದು ವರ್ಷದಲ್ಲಿ ಅಂದಾಜು 400% ಹೆಚ್ಚಳವಾಗಿದೆ. ಮಾರ್ಚ್ 28, 2023 ರಂದು ಈ ಷೇರು ರೂ 30.96 ರ ಮಟ್ಟವನ್ನು ತಲುಪಿತ್ತು. ಇದು ಈ ಷೇರು ಬೆಲೆಯ 52 ವಾರಗಳ ಕನಿಷ್ಠ ಮಟ್ಟವಾಗಿತ್ತು.
2024-2025ರ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಕೈಗೆಟುಕುವ ದರದ ವಸತಿಗಳ ಮೇಲೆ ಸರ್ಕಾರವು ಬಲವಾದ ಒತ್ತು ನೀಡಿದ್ದರಿಂದ NBCC (ಭಾರತ) ಷೇರುಗಳಲ್ಲಿ ಏರಿಕೆಯಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪ್ರಧಾನ ಮಂತ್ರಿ ಆವಾಸ್ ಯೋಜನೆ) ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 2 ಕೋಟಿ ಹೊಸ ಮನೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ.
ಲೋಕಸಭೆಯಲ್ಲಿ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸುವಾಗ, ನಿರ್ಮಲಾ ಸೀತಾರಾಮನ್ ಅವರು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಅರ್ಹ ಮಧ್ಯಮ ವರ್ಗದ ಜನರಿಗೆ ತಮ್ಮ ಸ್ವಂತ ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಸಹಾಯ ಮಾಡಲು ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.
ಭಾರತ ಸರ್ಕಾರದ ಎನ್​ಬಿಸಿಸಿ ಕಂಪನಿಯು 1960 ರಲ್ಲಿ ಅಸ್ತಿತ್ವಕ್ಕೆ ಬಂದಿತು. 2014 ರಲ್ಲಿ ‘ನವರತ್ನ’ ಸ್ಥಾನಮಾನವನ್ನು ಸಾಧಿಸಿತು. ಇದರ ವ್ಯಾಪಾರವು ಮೂರು ಪ್ರಾಥಮಿಕ ವರ್ಗಗಳಲ್ಲಿ ಹರಡಿದೆ.ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ (PMC), ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು EPC (Engineering Procurement & Construction- ಇಂಜಿನಿಯರಿಂಗ್ ಖರೀದಿ ಮತ್ತು ನಿರ್ಮಾಣ) ಒಪ್ಪಂದಗಳು. ರಿಯಲ್ ಎಸ್ಟೇಟ್‌ನಲ್ಲಿ ಅಪಾರ್ಟ್‌ಮೆಂಟ್‌ಗಳು ಮತ್ತು ಟೌನ್‌ಶಿಪ್‌ಗಳಂತಹ ವಸತಿ ಯೋಜನೆಗಳು. ಕಾರ್ಪೊರೇಟ್ ಕಚೇರಿಗಳು ಮತ್ತು ಶಾಪಿಂಗ್ ಮಾಲ್‌ಗಳಂತಹ ವಾಣಿಜ್ಯ ಯೋಜನೆಗಳು ಸೇರಿವೆ.

ತ್ರೈಮಾಸಿಕ ಲಾಭ ದುಪ್ಟಟ್ಟು: ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿದ ಟಾಟಾ ಮೋಟಾರ್ಸ್​ ಷೇರು

ಷೇರು ಬೆಲೆ ಒಂದೇ ತಿಂಗಳಲ್ಲಿ 50% ಹೆಚ್ಚಳ: ಸರ್ವೇಶ್ವರ್ ಫುಡ್ಸ್ ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್​; ಫೆಬ್ರವರಿ 10ರಂದು ಮತಹ್ವದ ಸಭೆ

ಮಂಗಳವಾರ 55% ಲಾಭಾಂಶ ಹಂಚಿಕೆ: ನೈಸರ್ಗಿಕ ಅನಿಲ ಉತ್ಪಾದಕ ಕಂಪನಿಯ ಎಕ್ಸ್-ಡಿವಿಡೆಂಡ್‌ ಸ್ಟಾಕ್​ ಖರೀದಿಗೆ ಬ್ರೋಕರೇಜ್​ ಸಂಸ್ಥೆಗಳ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 5 =
Remember me
