ಕೊಹಿಮಾ:ದೇಶ ಕಾಯುವ ಯೋಧರನ್ನೂ ಕರೊನಾ ಮಹಾಮಾರಿ ಎಡೆಬಿಡದೆ ಕಾಡುತ್ತಿದೆ. ನಾಗಾಲ್ಯಾಂಡ್​ನ ಕೊಹಿಮಾ ಜಿಲ್ಲೆಯಲ್ಲಿ 12 ಸೇನಾ ಸಿಬ್ಬಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಜಖಮಾ ಸೇನಾ ಕ್ಯಾಂಪ್​​ನ್ನು ಕ್ವಾರಂಟೈನ್​ ಸೆಂಟರ್​ ಆಗಿ ಪರಿವರ್ತಿಸಲಾಗಿದ್ದು, ಅದರಲ್ಲಿದ್ದ 12 ಯೋಧರಿಗೆ ಕರೊನಾ ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ಕಳೆದ ವಾರ ಹಲವು ಯೋಧರು ವಿವಿಧ ಭಾಗಗಳಿಂದ ಜಖಮಾ ಗ್ಯಾರಿಸನ್​ಗೆ ಆಗಮಿಸಿದ್ದರು. ಅವರನ್ನೆಲ್ಲ ಸೇನಾ ಶಿಬಿರದಲ್ಲಿಯೇ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು.
ಈ ಶಿಬಿರದಲ್ಲಿದ್ದವರಲ್ಲಿ ಜೂ.19ರಂದು ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಜೂ.23ರಂದು ಇಬ್ಬರಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಇಂದು 12 ಮಂದಿಯಲ್ಲಿ ಸೋಂಕು ಇರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟು 15 ಯೋಧರನ್ನೂ ಆರ್ಮಿ ಆಸ್ಪತ್ರೆಗೆ ಅಡ್ಮಿಟ್​ ಮಾಡಲಾಗಿದೆ. ಇವರೆಲ್ಲರಿಗೂ ಕರೊನಾದ ಒಂದೂ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
ನಾಗಾಲ್ಯಾಂಡ್​ನ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 347ಕ್ಕೆ ಏರಿದೆ. (ಏಜೆನ್ಸೀಸ್​)
ಉದ್ಯೋಗ ಸೃಷ್ಟಿಗೆ ಇಸ್ರೋದಿಂದ ಮಹತ್ವದ ಘೋಷಣೆ: ಖಾಸಗಿಯವರಿಗೂ ತೆರೆದ ಬಾಗಿಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
