ನವದೆಹಲಿ:ವಿಶ್ವಮಾರಿ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಭಾರತದಲ್ಲಿ ಜಾರಿಗೊಳಿಸಲಾಗಿರುವ ಲಾಕ್​ಡೌನ್​ನಿಂದಾಗಿ ಏಪ್ರಿಲ್​ ತಿಂಗಳೊಂದರಲ್ಲೇ 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವಿಶ್ವಬ್ಯಾಂಕ್​ ಹೇಳಿದೆ. ಸೆಂಟರ್​ ಫಾರ್​ ಮಾನಿಟರಿಂಗ್​ ಇಂಡಿಯನ್​ ಎಕಾನಮಿ ಎಂಬ ಖಾಸಗಿ ಸಂಸ್ಥೆಯ ಅಧ್ಯಯನ ವರದಿಯನ್ನು ಆಧರಿಸಿ ಈ ವಿಷಯ ತಿಳಿಸಿದೆ.
ಉದ್ಯೋಗ ನಷ್ಟಕ್ಕೆ ಒಳಗಾದವರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದವರು, ಬೀದಿಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಕೈಗಾಡಿ ಎಳೆಯುತ್ತಿದ್ದವರು ಹಾಗೂ ಆಟೋರಿಕ್ಷಾ ಚಾಲಕರು ಸೇರಿದ್ದಾರೆ ಎಂದು ಹೇಳಿದೆ.
ಕೋವಿಡ್​-19 ಲಾಕ್​ಡೌನ್​ ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಭಾರಿ ಪರಿಣಾಮ ಬೀರಿದೆ. ಒಂದು ಅಂದಾಜಿನ ಪ್ರಕಾರ ಭಾರತ ಸೇರಿ ವಿಶ್ವಾದ್ಯಂತ 49 ದಶಲಕ್ಷ ಜನರು ಕಡುಬಡತನಕ್ಕೆ ಒಳಗಾಗಲಿದ್ದಾರೆ. ಇವರಿಗೆ ದಿನಕ್ಕೆ ಕನಿಷ್ಠ 143 ರೂ. ಕೂಲಿ ಕೂಡ ಸಿಗುವುದು ಅನುಮಾನವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಕರೊನಾದ ವರ್ಷ ಭವಿಷ್ಯ ತಿಳಿಸಿದ್ದಾರೆ ನಿಮ್ಹಾನ್ಸ್​ ತಜ್ಞ: ಇದರಲ್ಲೇನಿದೆ ಗೊತ್ತಾ?
ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳಿಗೆ ಹಿನ್ನಡೆ:ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿರುವ ಕಡುಬಡತನವನ್ನು ನೀಗಿಸಿ, ಗೌರವಯುತವಾಗಿ ಬಾಳುವಂತೆ ಮಾಡುವ ಭರವಸೆಯೊಂದಿಗೆ 2014ರಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಅವರು ಬಡವರಿಗೆ ಅಡುಗೆ ಅನಿಲ ಸಿಲಿಂಡರ್​ ಪೂರೈಕೆ, ವಿದ್ಯುತ್​ ಸಂಪರ್ಕ ಮತ್ತು ತಲೆ ಮೇಲೊಂದು ಸೂರು ಒದಗಿಸುವ ಕಾರ್ಯಕ್ರಮಗಳನ್ನು ರೂಪಿಸಿ, ಭಾರಿ ಜನಪ್ರಿಯತೆ ಗಳಿಸಿಕೊಂಡಿದ್ದರು.
ಈ ಎಲ್ಲ ಕಾರಣದಿಂದಾಗಿ 2019ರಲ್ಲಿ ಅವರು ಭಾರಿ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗುವ ಅವಕಾಶ ಪಡೆದುಕೊಂಡಿದ್ದರು. ಆದರೆ, 2020ರಲ್ಲಿ ಕರೊನಾ ಪಿಡುಗು ಹಾಗೂ ಅದರ ನಿಯಂತ್ರಣಕ್ಕೆ ಲಾಕ್​ಡೌನ್​ನಂಥ ಕ್ರಮಗಳಿಂದಾಗಿ ಅವರ ಆ ಎಲ್ಲ ಕಲ್ಯಾಣ ಕಾರ್ಯಕ್ರಮಗಳಿಗೂ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್​ ಅಭಿಪ್ರಾಯಪಟ್ಟಿದೆ.
ದೇಶದ ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಲವು ಆರ್ಥಿಕ ಉತ್ತೇಜನಗಳನ್ನು ಘೋಷಿಸಿದ್ದಾರೆ. ಅದರಲ್ಲೂ 20 ಲಕ್ಷ ಕೋಟಿ ರೂ. ಆರ್ಥಿಕ ನೆರವು ಒದಗಿಸುವುದಾಗಿ ಹೇಳಿದ್ದಾರೆ. ಇದೆಲ್ಲದ್ದಕ್ಕೂ ಹಣ ಹೊಂದಿಸಿಕೊಂಡು ರಾಷ್ಟ್ರದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವಲ್ಲಿ ಅವರು ಸಾಕಷ್ಟು ಒತ್ತಡಗಳಿಗೆ ಒಳಗಾಗುವುದು ನಿಶ್ಚಿತ ಎಂದು ಹೇಳಿದೆ.
ಕರೊನಾ ಸಂಕಷ್ಟದಲ್ಲೂ ಈ ಕಂಪನಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
