ಕಠ್ಮಂಡು:ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಾರಿಗೆ ಬಸ್​ವೊಂದು ಸೇತುವೆಯಲ್ಲಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು, ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ 12 ಜನರು ಸಾವನ್ನಪ್ಪಿದ ಘಟನೆ ನೇಪಾಳದ ಡ್ಯಾಂಗ್ ಜಿಲ್ಲೆಯಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಅಪರಾಧವೇ? ಮದ್ರಾಸ್​ ಹೈಕೋರ್ಟ್​ ಕೊಟ್ಟ ತೀರ್ಪಿದು…
ಅಪಘಾತದಲ್ಲಿ ಮೃತಪಟ್ಟವರ ಪೈಕಿ ಎಂಟು ಜನರ ಗುರುತು ಮಾತ್ರ ಇನ್ನೂ ತಿಳಿದುಬಂದಿಲ್ಲ ಎಂದು ವರದಿಯಾಗಿದೆ. “ಪ್ಯಾಸೆಂಜರ್ ಬಸ್ ಬಂಕೆಯ ನೇಪಾಲ್‌ಗುಂಜ್‌ನಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ಆದರೆ ಸೇತುವೆಯಿಂದ ರಾಪ್ತಿ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಎಂಟು ಮೃತ ಪ್ರಯಾಣಿಕರ ಗುರುತನ್ನು ಮಾತ್ರ ನಾವು ಖಚಿತಪಡಿಸಿದ್ದೇವೆ” ಎಂದು ಪೊಲೀಸ್ ಮುಖ್ಯ ಇನ್ಸ್‌ಪೆಕ್ಟರ್ ಉಜ್ವಲ್ ಬಹದ್ದೂರ್ ಸಿಂಗ್ ಏರಿಯಾ ಪೊಲೀಸ್ ಕಛೇರಿ ತಿಳಿಸಿದೆ.
ಪೊಲೀಸರ ಪ್ರಕಾರ ಬಸ್ ಅಪಘಾತದಲ್ಲಿ ಹೆಚ್ಚುವರಿ 22 ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತರ ಪೈಕಿ ಇಬ್ಬರು ಭಾರತೀಯರನ್ನು ಬಿಹಾರದ ಮಲಾಹಿ ಮೂಲದ ಯೋಗೇಂದ್ರ ರಾಮ್ (67) ಮತ್ತು ಉತ್ತರ ಪ್ರದೇಶದ ಮುನೆ (31) ಎಂದು ಗುರುತಿಸಲಾಗಿದೆ. “ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಮಾಹಿ ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಮುಖ್ಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ,(ಏಜೆನ್ಸೀಸ್).
ಟೆನ್ನಿಸ್​ ಬಾಲ್​ ಕ್ರಿಕೆಟ್​ ಲೀಗ್​: ಎಂಟು ತಂಡಕ್ಕೆ ಈ ಸ್ಟಾರ್​ ನಟರೇ ಓನರ್ಸ್​​! ಇಲ್ಲಿದೆ ನೋಡಿ ಪಟ್ಟಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
