ನವದೆಹಲಿ:ಜಪಾನ್​ನಲ್ಲಿ ತಡೆಹಿಡಿಯಲ್ಪಟ್ಟಿರುವ ಪ್ರಯಾಣಿಕರ ಹಡಗು ಡೈಮಂಡ್ ಪ್ರಿನ್ಸಸ್​ನಲ್ಲಿ ಮತ್ತೆ ನಾಲ್ವರು ಭಾರತೀಯರಿಗೆ ಕರೊನಾವೈರಸ್ ತಗುಲಿರುವುದು ಧೃಢಪಟ್ಟಿದ್ದು, ಭಾರತೀಯ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಹಡಗಿನಲ್ಲಿದ್ದ 138 ಭಾರತೀಯರಲ್ಲಿ ಇನ್ನೂ 126 ಜನರ ವೈದ್ಯಕೀಯ ಪರೀಕ್ಷೆ ವರದಿ ಬುಧವಾರದೊಳಗೆ ಬರುವ ನಿರೀಕ್ಷೆ ಇದೆ. ಈಗಾಗಲೇ ಸೋಂಕು ಧೃಢಪಟ್ಟ 8 ಜನರನ್ನು ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಅವರೆಲ್ಲ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕ ಸೋಂಕು ಇಲ್ಲದಿರುವುದು ಧೃಢಪಟ್ಟವರನ್ನು ಟೊಕಿಯೊದಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ರಕ್ಷಿಸಿ, ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಹಡಗಿನಲ್ಲಿರುವ ಸೋಂಕಿತರ ಸಂಖ್ಯೆ 630 ದಾಟಿದ್ದು, ಇನ್ನೂ ಸಾವಿರ ಪ್ರಯಾಣಿಕರು ಮತ್ತು ಸಿಬ್ಬಂದಿ ಹಡಗಿನಲ್ಲೇ ಇದ್ದಾರೆ. ಕಳೆದ ಫೆ. 19ರಿಂದ ಆರೋಗ್ಯವಾಗಿರುವವರನ್ನು ಹಡಗಿನಿಂದ ಬೇರೆಡೆ ಸ್ಥಳಾಂತರಿಸಲಾಗುತ್ತಿದ್ದು, ಶನಿವಾರ ಸುಮಾರು 100 ಜನರನ್ನು ಬೇರೆಡೆ ಕರೆದೊಯ್ಯಲಾಗಿದೆ.
ಚೀನಾದಲ್ಲಿ ಕರೊನಾದಿಂದಾಗಿ ಈವರೆಗೆ 2442 ಜನರು ಸಾವನ್ನಪ್ಪಿದ್ದು, 76,936 ಜನರಲ್ಲಿ ಸೋಂಕು ಧೃಢಪಟ್ಟಿದೆ. ಕಳೆದ ಶನಿವಾರ 2230 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, 22,288 ಜನರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚೀನಾದ ಹುಬೇ ಪ್ರಾಂತ್ಯದಲ್ಲಿ 2,346 ಜನರು ಮೃತರಾಗಿದ್ದು, ಸುಮಾರು 64 ಸಾವಿರ ಜನ ಸೋಂಕಿತರು ಇಲ್ಲಿ ವಾಸವಾಗಿದ್ದಾರೆ.
ಸೋಂಕಿತರ ಕರೆತಂದಿದ್ದಕ್ಕೆ ಕಿಡಿ
ಕರೊನಾ ಸೋಂಕು ಧೃಢಪಟ್ಟ 14 ಜನರನ್ನು ಜಪಾನ್​ನಿಂದ ಅಮೆರಿಕಕ್ಕೆ ಕರೆತಂದ ಕಾರಣ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ. ಜಪಾನ್​ನಲ್ಲಿ ತಡೆಹಿಟಿಯಲ್ಪಟ್ಟಿರುವ ಡೈಮಂಡ್ ಪ್ರಿನ್ಸಸ್ ಹಡಗಿನಿಂದ ಅಮೆರಿಕ ಪ್ರಜೆಗಳನ್ನು ವಿಶೇಷ ವಿಮಾನಗಳ ಮೂಲಕ ಕರೆದೊಯ್ಯಲಾಗಿದೆ. ಆದರೆ ಈ ವೇಳೆ ಅಧ್ಯಕ್ಷ ಟ್ರಂಪ್ ಆದೇಶ ಮೀರಿ 14 ಸೋಂಕಿತರನ್ನು ಅಮೆರಿಕಕ್ಕೆ ಕರೆದೊಯ್ಯಲಾಗಿದೆ. ಸೋಂಕಿತರನ್ನೆಲ್ಲ ಜಪಾನ್​ನಲ್ಲೇ ಉಳಿಸಲು ಟ್ರಂಪ್ ತಿಳಿಸಿದ್ದರು ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
