ನವದೆಹಲಿ:ಹಿಂಡನ್​ಬರ್ಗ್ ವರದಿ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹ ಕಂಪನಿಗಳ ಷೇರುಗಳಲ್ಲಿನ ಕುಸಿತ ಮುಂದುವರಿದಿದೆ. ಕಳೆದ ಒಂದು ತಿಂಗಳಲ್ಲಿ ಅದಾನಿ ಸಂಸ್ಥೆಯ 10 ಕಂಪನಿಗಳ ಹೂಡಿಕೆಯು ನೆಲಕಚ್ಚಿದ್ದು, ಗೌತಮ್ ಅದಾನಿಗೆ 12 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಅದಾನಿ ಗ್ರೂಪ್​ನ ಮಾರುಕಟ್ಟೆ ಬಂಡವಾಳವು ಜನವರಿ 24ರ ಮೊದಲು ಸುಮಾರು 19 ಲಕ್ಷ ಕೋಟಿ ರೂ.ಗಳಷ್ಟಿತ್ತು. ಆದರೆ ಅಮೆರಿಕ ಮೂಲದ ಹಿಂಡನ್​ಬರ್ಗ್ ಸ್ಪೋಟಕ ವರದಿ ಬಿಡುಗಡೆ ಮಾಡಿದ ನಂತರ ಅದರ ಮೌಲ್ಯ ಸರಿಸುಮಾರು 7.2 ಲಕ್ಷ ಕೋಟಿಗೆ ಕುಸಿದಿದೆ. ಅದಾನಿ ಕಂಪನಿಯ ಏಳು ಪ್ರಮುಖ ಕಂಪನಿಗಳು ಶೇ.85ರಷ್ಟು ಕುಸಿತ ಕಂಡಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಟ್ರಾನ್ಸ್​ಮಿಷನ್ಸ್​ನಲ್ಲಿ ಭಾರಿ ನಷ್ಟ ಉಂಟಾಗಿದ್ದು, ಕೇವಲ ಒಂದು ತಿಂಗಳಲ್ಲಿ ಸುಮಾರು ಶೇ.80ರಷ್ಟು ಷೇರಿನ ಮೌಲ್ಯ ಕುಸಿದು, 52 ವಾರಗಳ ಕನಿಷ್ಠ ಮೌಲ್ಯ ತಲುಪಿವೆ. ಹಿಂಡನ್​ಬರ್ಗ್ ವರದಿಯ ಒಂದು ತಿಂಗಳ ನಂತರ ಅದಾನಿ ಗ್ರೂಪ್​ನ ಲಿಸ್ಟೆಡ್ ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಹೆಣಗಾಡುತ್ತಿವೆ. ಷೇರುಗಳು ಶೇ. 25ರಿಂದ 80ರಷ್ಟು ಕಡಿಮೆಯಾಗಿದೆ. ಅದಾನಿ ಅವರ ನಿವ್ವಳ ಮೌಲ್ಯವು 120 ಬಿಲಿಯನ್ ಡಾಲರ್​ನಿಂದ 41 ಬಿಲಿಯನ್ ಡಾಲರ್​ಗೆ ಕುಸಿದಿದೆ.
ಅದಾನಿ ಸಮೂಹದ 7 ಕಂಪನಿಗಳಲ್ಲಿ 30,127 ಕೋಟಿ ರೂ. ಹೂಡಿಕೆ ಮಾಡಿದ್ದ ಭಾರತೀಯ ಜೀವ ವಿಮಾ ನಿಗಮವು (ಎಲ್​ಐಸಿ) ಈಗ ನಷ್ಟ ಅನುಭವಿಸುತ್ತಿದೆ. ಅದಾನಿ ಷೇರುಗಳಲ್ಲಿನ ಎಲ್​ಐಸಿ ಹೂಡಿಕೆ ಮೌಲ್ಯ ಜನವರಿ 24ರಂದು 81,268 ಕೋಟಿಗಳಿಂದ 33,149 ಕೋಟಿ ರೂ.ಗೆ ಇಳಿದಿದೆ ಎಂದು ಮಾರುಕಟ್ಟೆಯ ಅಂಕಿ-ಅಂಶಗಳು ತೋರಿಸಿವೆ. ಹಿಂಡನ್​ಬರ್ಗ್ ವರದಿ ಪರಿಣಾಮ ಎಲ್​ಐಸಿ ಹೂಡಿಕೆ ಮೌಲ್ಯದಲ್ಲಿ ಕುಸಿತವುಂಟಾಗಿದೆ. ಎಲ್​ಐಸಿ ಲಾಭವು ಈಗ 3 ಸಾವಿರ ಕೋಟಿ ರೂ.ಗೆ ಇಳಿದಿದೆ. ಅದಾನಿ ಷೇರುಗಳು ಕುಸಿಯುತ್ತಿರುವ ವಿಧಾನವನ್ನು ಗಮನಿಸಿದರೆ ಇದು ಶೀಘ್ರದಲ್ಲೇ ಎಲ್​ಐಸಿಗೆ ನಷ್ಟವಾಗಿ ಬದಲಾಗುವ ಸಾಧ್ಯತೆಯಿದೆ. ಜನವರಿ 30ರಿಂದ ಎಲ್​ಐಸಿ ಅದಾನಿ ಕಂಪನಿಗಳಲ್ಲಿ ಯಾವುದೇ ಷೇರು ಖರೀದಿಸಿಲ್ಲ ಅಥವಾ ಮಾರಾಟ ಮಾಡಿಲ್ಲ. ಇದರ ಆಧಾರದ ಮೇಲೆ ಮಾಡಿರುವ ವಿಶ್ಲೇಷಣೆ ಪ್ರಕಾರ, ಎಲ್ಲ ಅದಾನಿ ಗ್ರೂಪ್ ಕಂಪನಿಗಳ ಅಡಿಯಲ್ಲಿ ತನ್ನ ಒಟ್ಟು ಖರೀದಿ ಮೌಲ್ಯ 30,127 ಕೋಟಿ ರೂ. ಎಂದು ಎಲ್​ಐಸಿ ಘೋಷಿಸಿದೆ.
ಇದನ್ನೂ ಓದಿ:ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ
ಉದ್ಯಮಿ ಗೌತಮ್ ಅದಾನಿ ಸಮೂಹ ಕುರಿತು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ವರದಿಯನ್ನು ಆಧರಿಸಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಈ ವಿಷಯವನ್ನು ಪ್ರಸ್ತಾಪಿಸಿದ ವಕೀಲ ಎಂ.ಎಲ್. ಶರ್ಮಾ ಅವರ ಮನವಿಯನ್ನು ತಿರಸ್ಕರಿಸಿತು. ಹಿಂಡನ್​ಬರ್ಗ್ ವರದಿಯ ಹಿಂದೆ ಪಿತೂರಿ ಇದೆ ಎಂದು ಶರ್ಮಾ ಆರೋಪಿಸಿದ್ದಾರೆ. ‘ನಾವು ಮಾಧ್ಯಮಗಳಿಗೆ ಯಾವುದೇ ತಡೆಯಾಜ್ಞೆ ನೀಡುವುದಿಲ್ಲ. ಈ ವಿಷಯದಲ್ಲಿ ಶೀಘ್ರದಲ್ಲೇ ಆದೇಶ ಪ್ರಕಟಿಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ ಪರ್ದಿವಾಲಾ ಅವರಿದ್ದ ಪೀಠ ಹೇಳಿದೆ. ಅರ್ಜಿದಾರರೊಬ್ಬರ ಸಲಹೆ ಮತ್ತು ಪಿಐಎಲ್​ಗಳ ಬ್ಯಾಚ್​ನಲ್ಲಿ ಫೋರ್ಬ್ಸ್ ಪ್ರಕಟಿಸಿದ ವರದಿ ದಾಖಲಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿತ್ತು. ಹಿಂಡನ್​ಬರ್ಗ್ ರಿಸರ್ಚ್ ವರದಿ ಹೊರಬಿದ್ದ ನಂತರ ಅದಾನಿ ಗ್ರೂಪ್ ಷೇರುಗಳ ಕುಸಿತ ಕುರಿತು ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಸಂಬಂಧ ಸುಪ್ರೀಂಕೋರ್ಟ್ ಫೆಬ್ರವರಿ 20ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಫೆಬ್ರವರಿ 17 ರಂದು ಸುಪ್ರೀಂಕೋರ್ಟ್ ಷೇರು ಮಾರುಕಟ್ಟೆಗೆ ನಿಯಂತ್ರಣ ಕ್ರಮಗಳನ್ನು ಬಲಪಡಿಸುವ ಉದ್ದೇಶಿತ ತಜ್ಞರ ಸಮಿತಿ ಕುರಿತು ಕೇಂದ್ರದ ಸಲಹೆ ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಿಲು ನಿರಾಕರಿಸಿತ್ತು.
ಇದನ್ನೂ ಓದಿ:ಆಸ್ತಿ ಆಸೆಗೆ ಒಂದೇ ಮನೆಯ ನಾಲ್ವರ ಕೊಲೆ; ಮಕ್ಕಳಿಬ್ಬರ ಪ್ರಾಣ ಉಳಿಸಿತೇ ನಿದ್ರೆ-ಆಟ!?
ಢಾಕಾ:ಬಾಂಗ್ಲಾದೇಶಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸುವುದಾಗಿ ಅದಾನಿ ಪವರ್ ಭರವಸೆ ನೀಡಿದೆ. ಕಲ್ಲಿದ್ದಲು-ಉತ್ಪಾದಿತ ವಿದ್ಯುತ್ ಬೆಲೆ ದುಬಾರಿಯಾದ ಕಾರಣ ಅದಾನಿ ಪವರ್ ಜತೆ 2017ರಲ್ಲಿ ಮಾಡಿಕೊಂಡಿದ್ದ ವಿದ್ಯುತ್ ಖರೀದಿ ಒಪ್ಪಂದ ಪರಿಷ್ಕರಿಸಲು ಬಾಂಗ್ಲಾದೇಶದ ಸರ್ಕಾರಿ ವಿದ್ಯುತ್ ಅಭಿವೃದ್ಧಿ ಮಂಡಳಿ (ಪಿಡಿಬಿ) ಪ್ರಯತ್ನಿಸಿತ್ತು. ಅದಾನಿ ಪವರ್ ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಧಾನಕ್ಕಾಗಿ ಐದು ಸದಸ್ಯರ ನಿಯೋಗವನ್ನು ಕಳುಹಿಸಿದೆ. ಈ ವೇಳೆ ಮಾತುಕತೆ ಅಂತಿಮಗೊಂಡಿದೆ ಎನ್ನಲಾಗಿದೆ. ಬಾಂಗ್ಲಾದೇಶವು ಪ್ರಸ್ತುತ ಭಾರತದಿಂದ 1,160 ಮೆಗಾವಾಟ್ ವಿದ್ಯುತ್ ಆಮದು ಮಾಡಿಕೊಳ್ಳುತ್ತಿದೆ. 2017ರ ಒಪ್ಪಂದ ಪ್ರಕಾರ ಅದಾನಿ ಪವರ್​ನಿಂದ 25 ವರ್ಷಗಳವರೆಗೆ ವಿದ್ಯುತ್ ಖರೀದಿಸಲು ಬಾಂಗ್ಲಾದೇಶಕ್ಕೆ ಅವಕಾಶವಿದೆ. ಅದಾನಿ ಪವರ್ ಉಲ್ಲೇಖಿಸಿದ ಕಲ್ಲಿದ್ದಲು ಬೆಲೆ (400 ಡಾಲರ್/ ಎಂಟಿ) ದುಬಾರಿಯಾಗಿದೆ. ಇದು 250 ಡಾಲರ್/ಎಂಟಿಗಿಂತ ಕಡಿಮೆಯಿರಬೇಕು ಎಂದು ಅಲ್ಲಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವದೆಹಲಿ:ಷೇರುಪೇಟೆಯಲ್ಲಿ ಅದಾನಿ ಸಮೂಹದ ಬಹುತೇಕ ಸಂಸ್ಥೆಗಳು ಶುಕ್ರವಾರವೂ ಕುಸಿತ ಮುಂದುವರಿಸಿವೆ. ಅದಾನಿ ಟ್ರಾನ್ಸ್​ಮಿಷನ್ ಶೇ.5, ಅದಾನಿ ಗ್ರೀನ್ ಎನರ್ಜಿ ಶೇ.5, ಅದಾನಿ ಟೋಟಲ್ ಗ್ಯಾಸ್ ಶೇ.5, ಅದಾನಿ ಎಂಟರ್​ಪ್ರೖೆಸಸ್ ಶೇ. 4.98ರಷ್ಟು ಕುಸಿತ ಕಂಡಿವೆ. ಅದಾನಿ ಪವರ್ ಶೇ. 4.98, ಎನ್​ಡಿಟಿವಿ ಶೇ. 4.05 ಮತ್ತು ಅದಾನಿ ವಿಲ್ಮರ್ ಶೇ. 3.35 ಕುಸಿತ ಕಂಡಿವೆ. ಆದರೆ ಅಂಬುಜಾ ಸಿಮೆಂಟ್ ಶೇ. 2.45, ಅದಾನಿ ಪೋರ್ಟ್ ಶೇ. 1.24 ಮತ್ತು ಎಸಿಸಿ ಶೇ 0.03 ರಷ್ಟು ಏರಿಕೆ ಕಂಡಿವೆ. ಅದಾನಿ ಗ್ರೂಪ್​ನ ಹತ್ತು ಸಂಸ್ಥೆಗಳ ಪೈಕಿ ಎಂಟು ಸಂಸ್ಥೆಗಳ ಷೇರುಗಳು ನಕಾರಾತ್ಮಕವಾಗಿ ಕೊನೆಗೊಂಡಿವೆ. ಶುಕ್ರವಾರ ಸೆನ್ಸೆಕ್ಸ್ 141.87 ಅಂಶ ಕುಸಿತ ಕಂಡು 59,463.93ರಲ್ಲಿ ಮುಕ್ತಾಯವಾಗಿದೆ.
ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fourteen =
Remember me
