ಆಗ್ರಾ:ಆ 12 ವರ್ಷದ ಬಾಲಕ ಆರ್​ಒ ನೀರಿನ ಘಟಕದಲ್ಲಿ ಕೆಲಸ ಮಾಡಿ, ತನ್ನ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುತ್ತಿದ್ದ. ಅದೊಂದು ದಿನ ಆ ಘಟಕದ ಮಾಲೀಕನ ಚಿನ್ನಾಭರಣ ಕಳೆದುಹೋಯಿತು. ಅದನ್ನು ಈ ಬಾಲಕನೇ ಕದ್ದಿದ್ದಾನೆ ಎಂದು ಶಂಕಿಸಿದ ಮಾಲೀಕ ತನ್ನ ಮನೆಯ ಮೂರನೇ ಮಹಡಿಯಲ್ಲಿರುವ ಕೋಣೆಗೆ ಆ ಬಾಲಕನನ್ನು ಕರೆದೊಯ್ದು, ಕೂಡಿ ಹಾಕಿದ್ದಲ್ಲದೆ, ಚೆನ್ನಾಗಿ ಥಳಿಸಿದ. ವಿದ್ಯುತ್​ ಶಾಕ್​ ಕೊಟ್ಟ. ಸಿಗರೆಟ್​ನಿಂದ ಸುಟ್ಟ.
ಕೊನೆಗೆ ಬಾಲಕನ ಮನೆಗೆ ಹೋಗಿ, ಮನೆಯನ್ನು ಶೋಧಿಸುವ ನೆಪದಲ್ಲಿ ಎಲ್ಲವನ್ನೂ ಚಿಲ್ಲಾಪಿಲ್ಲಿ ಮಾಡಿದ ಆತ, ಬಾಲಕನ ಪಾಲಕರನ್ನು ತನ್ನ ಮನೆಗೆ ಕರೆತಂದು ಬಾಲಕನೊಂದಿಗೆ ಕೂಡಿ ಹಾಕಿದ. ಅಲ್ಲದೆ, ಅವರ ಮೇಲೂ ಮನಬಂದಂತೆ ಹಲ್ಲೆ ಮಾಡಿದ. ಪಾಲಕರನ್ನು ಹುಡುಕಿಕೊಂಡ ದಂಪತಿಯ ಹಿರಿಯ ಮಗ ಬಂದಾಗ ಆತನನ್ನೂ ಕೂಡಿದ ಹಾಕಿದ ಮಾಲೀಕರ ಆತನ ಮೇಲೂ ಹಲ್ಲೆ ಮಾಡಿದ. ಕೊನೆಗೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ದಂಪತಿಯ ಸೊಸೆಯನ್ನು ಕರೆಯಿಸಿಕೊಂಡು ಆಕೆಯನ್ನೂ ಕೂಡಿ ಹಾಕಿಕೊಂಡು ಹೊಡೆದ. ತನ್ನ ಮನೆಯ ಹೆಣ್ಣುಮಕ್ಕಳನ್ನು ಕರೆಯಿಸಿಕೊಂಡು, ಆಕೆಯನ್ನು ಬೆತ್ತಲೆ ಮಾಡಿಸಿ ಹೊಡೆಸಿದ…
ಇದನ್ನೂ ಓದಿ:ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿ ದೈಹಿಕ ಸಂಪರ್ಕಕ್ಕೆ ಬಾಲೆಗೆ ಒತ್ತಾಯ, ಆತ್ಮಹತ್ಯೆಗೆ ಯತ್ನ
ಇದು ಆಗ್ರಾದ ಸರಾಯ್​ ಖ್ವಾಜಾದಲ್ಲಿರುವ ಆರ್​ಒ ನೀರಿನ ಘಟಕದ ಮಾಲೀಕ ಅಬ್ರಾರ್​ ಎಸಗಿರುವ ಕೃತ್ಯ. ಇದೀಗ ಈತನೂ ಸೇರಿ ಈ ಕೃತ್ಯಕ್ಕೆ ಸಹಕರಿಸಿದ್ದಕ್ಕಾಗಿ ಮೋಹ್ಸಿನ್​, ಜುಬೇರ್​, ನದೀಂ ಮತ್ತು ಶ್ಯಾಮಾ ಎಂಬವರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇವರ ಅಕ್ರಮ ಬಂಧನದಲ್ಲಿದ್ದ ಬಾಲಕನ ಅಣ್ಣ ಹೇಗೋ ತಪ್ಪಿಸಿಕೊಂಡು ಹೋಗಿ ಸಂಬಂಧಿಕರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು 36 ಗಂಟೆಗಳಿಂದ ಅಕ್ರಮ ಬಂಧನದಲ್ಲಿದ್ದ ಇವರೆಲ್ಲರನ್ನೂ ಬಿಡುಗಡೆ ಮಾಡಿಸಿ ಠಾಣೆಗೆ ಕರೆದೊಯ್ದುರು. ಬಳಿಕ ವೈದ್ಯಕೀಯ ಪರೀಕ್ಷೆ ಮಾಡಿಸಿ, ಕಳುಹಿಸಿದರು ಎನ್ನಲಾಗಿದೆ.
ತೇಜಸ್ವಿನಿ ಪ್ರಕಾಶ್​ ಸಾವಿನ ಸುದ್ದಿ ವೈರಲ್​!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + 18 =
Remember me
