ನವದೆಹಲಿ:ಕಾರುಗಳಲ್ಲಿ ಇರಿಸಿರುವ ಹಣದ ಬ್ಯಾಗ್​ಗಳನ್ನು ಕದಿಯಲು ಕಳ್ಳತನವನ್ನೇ ಕಾಯಕವನ್ನಾಗಿಸಿಕೊಂಡಿದ್ದ ತಾಯಿಯೇ ಪುತ್ರನಿಗೆ ಕಲಿಸಿಕೊಟ್ಟಿದ್ದಾಳೆ. ಈ ‘ಚೋರ’ ಕದಿಯುತ್ತಿದ್ದ ಹಣವನ್ನು ಸಂರಕ್ಷಿಸಿಡುವ ಜತೆಗೆ ಮೊಮ್ಮಗನಿಗೆ ಅಜ್ಜಿಯೇ ರಕ್ಷಕಿಯಾಗಿದ್ದಳು. ಇದೀಗ ‘ಚೋರ’ ಮತ್ತು ಅಜ್ಜಿ ಸಿಕ್ಕಿಬಿದ್ದಿದ್ದು, ಕಳ್ಳಿ ತಾಯಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಅಂಬೇಡ್ಕರ್​ನಗರ ಪ್ರದೇಶದಲ್ಲಿ ನಿಲುಗಡೆ ಮಾಡಲಾಗಿದ್ದ ಕಾರಿನ ಹಿಂಬದಿ ಸೀಟಿನಲ್ಲಿ ಇರಿಸಲಾಗಿದ್ದ 1.2 ಲಕ್ಷ ರೂ. ನಗದು ಇದ್ದ ಬ್ಯಾಗ್​ ಅನ್ನು ಜು.27ರಂದು 12 ವರ್ಷದ ಬಾಲಕನೊಬ್ಬ ಕದ್ದು ಪರಾರಿಯಾಗಿದ್ದ. ಹಣ ಕಳೆದುಕೊಂಡಿದ್ದವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಕಾರು ನಿಲುಗಡೆ ಮಾಡಿದ್ದ ಪ್ರದೇಶದಲ್ಲಿನ ಸಿಸಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದ್ದ ಪೊಲೀಸರಿಗೆ ಬಾಲಕನ ಸುಳಿವು ಸಿಕ್ಕಿತ್ತು.
ಸೋಮವಾರ ಬಾಲಕನು ಅನುಮಾನಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ನಮ್ಮ ಸಿಬ್ಬಂದಿಗೆ ಖಚಿತ ಮಾಹಿತಿ ದೊರೆತಿತ್ತು. ತಕ್ಷಣವೇ ಅಲ್ಲಿಗೆ ಹೋಗಿ ಆತನನ್ನು ವಶಕ್ಕೆ ಪಡೆದುಕೊಂಡರು. ಆತನ ಬಳಿ 5 ಸಾವಿರ ರೂ. ನಗದು ಪತ್ತೆಯಾಗಿದ್ದಾಗಿ ಡಿಸಿಪಿ (ದಕ್ಷಿಣ) ಅತುಲ್​ ಕುಮಾರ್​ ಠಾಕೂರ್​ ತಿಳಿಸಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವ ತಗ್ಗಿಸುವ ನೇಸಲ್​ ಸ್ಪ್ರೇ
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ತಾಯಿಯ ಸೂಚನೆ ಮೇರೆಗೆ ವಾಹನದಲ್ಲಿ ಇದ್ದ ಹಣದ ಬ್ಯಾಗ್​ ಅನ್ನು ಎಗರಿಸಿದ್ದಾಗಿ ಹೇಳಿದ್ದ. ಈತ ಕೊಟ್ಟ ಮಾಹಿತಿಯ ಮೇರೆಗೆ ಮನೆಯ ಮೇಲೆ ದಾಳಿ ಮಾಡಿದಾಗ 1.05 ಲಕ್ಷ ರೂ. ನಗದಿನೊಂದಿಗೆ ಅಜ್ಜಿಯನ್ನೂ ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಅಜ್ಜಿ ಮತ್ತು ತಾಯಿ ಈ ಚೋರನನ್ನು ಬಳಸಿಕೊಂಡು ಹಣ, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಕಳವು ಮಾಡುತ್ತಿದ್ದರು. ತಾಯಿ-ಮಗ ಕದ್ದು ತರುತ್ತಿದ್ದ ನಗದು, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಅಜ್ಜಿ ಜೋಪಾನವಾಗಿ ಬಚ್ಚಿಟ್ಟು, ಕಾವಲು ಕಾಯುತ್ತಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.
ಬಾಲಕ ಸಿಕ್ಕಿಬಿದ್ದಿದ್ದು ಗೊತ್ತಾದ ನಂತರದಲ್ಲಿ ತಾಯಿ ತಲೆಮರೆಸಿಕೊಂಡಿದ್ದಾಳೆ. ಆಕೆಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಜತೆಗೆ ಅಜ್ಜಿ-ತಾಯಿ-ಮೊಮ್ಮಗ ಇನ್ನೂ ಯಾವ್ಯಾವ ಪ್ರದೇಶದಲ್ಲಿ ಕಳ್ಳತನ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
video/ ಮರಳು ಕಲಾವಿದನ ಕೈಯಲ್ಲಿ ಅರಳಿತು ಶ್ರೀರಾಮ ಮಂದಿರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
