ಭೋಪಾಲ್​:ಸೆಲ್ಫಿ ಕ್ರೇಜ್​ ಎಷ್ಟೋ ಜನರು ಜೀವವನ್ನೇ ಕಳೆದುಕೊಳ್ಳುವಂತೆ ಮಾಡಿರುವ ಅನೇಕ ಸುದ್ದಿಗಳನ್ನು ಕೇಳಿದ್ದೀರಿ. ಇದೀಗ ಅಂತದ್ದೇ ಒಂದು ಕಥೆ ಮಧ್ಯಪ್ರದೇಶದ ಇಂದೋರ್​ನಲ್ಲಿ ವರದಿಯಾಗಿದೆ. 12 ವರ್ಷದ ಬಾಲಕಿಯೊಬ್ಬಳು ನೇಣು ಹಾಕಿಕೊಂಡವರ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾಳೆ.
ಇದನ್ನೂ ಓದಿ:ಬಿಕಿನಿ ತೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಕಂಗನಾ; ತಾಯಿ ಭೈರವಿ ನಗ್ನಳಾಗಿ ಬಂದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ
ಇಂದೋರ್​ನ ವೈಷ್ಣೋದೇವಿ ನಗರದಲ್ಲಿ ಇಂತಹ ಘಟನೆ ನಡೆದಿದೆ. 12 ವರ್ಷದ ಬಾಲಕಿ ಅಪ್ಪನೊಂದಿಗೆ ಮನೆಯಲ್ಲಿದ್ದಳು. ಇತ್ತೀಚೆಗೆ ರೂಂ ಸೇರಿಕೊಂಡ ಬಾಲಕಿ ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದ್ದಾಳೆ. ನೇಣು ಕಟ್ಟಿ, ಕುರ್ಚಿ ಮೇಲೆ ನಿಂತು ನೇಣು ಹಾಕಿಕೊಂಡವರಂತೆ ಸೆಲ್ಫಿ ತೆಗೆದುಕೊಂಡಿದ್ದಾಳೆ. ಕುರ್ಚಿಯಿಂದ ಇಳಿಯಲು ಹೊರಟಾಗ ಆಕೆಯ ಕಾಲು ಜಾರಿದ್ದು, ಕುರ್ಚಿ ಬಿದ್ದಿದೆ. ಬಾಲಕಿಯ ಕುತ್ತಿಗೆಯಲ್ಲಿದ್ದ ನೇಣು ಎಳೆದು, ಆಕೆಯ ಉಸಿರು ನಿಂತು ಹೋಗಿದೆ.
ಇದನ್ನೂ ಓದಿ:80 ವರ್ಷದ ಈ ವ್ಯಕ್ತಿ 80 ಪೊರ್ಶೆ ಕಾರುಗಳ ಮಾಲೀಕ! ಕಾರಿಗಾಗೇ ದೊಡ್ಡ ಬಿಲ್ಡಿಂಗ್​ ಕಟ್ಟಿದ ಭೂಪ!
ತುಂಬಾ ಹೊತ್ತಾದರೂ ಮಗಳು ಕೋಣೆಯಿಂದ ಹೊರಗೆ ಬಾರದಿದ್ದನ್ನು ಕಂಡ ತಂದೆಗೆ ಗಾಬರಿಯಾಗಿದೆ. ಕೋಣೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಮಗಳ ಮೃತ ದೇಹ ನೇಣಿನಲ್ಲಿ ನೇತಾಡುತ್ತಿರುವುದು ಕಂಡಿದೆ. ತಕ್ಷಣ ಅಕ್ಕ ಪಕ್ಕದ ಮನೆಯವರನ್ನು ಕರೆದು, ಅವರ ಸಹಾಯದಿಂದ ಮಗಳ ದೇಹವನ್ನು ಕೆಳಕ್ಕಿಳಿಸಲಾಗಿದೆ. ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಇದು ಸೆಲ್ಫಿಯಿಂದಾದ ಅನಾಹಿತದಂತೆ ಕಂಡಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + thirteen =
Remember me
