ಮುಂಬೈ:ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (Tata Investment Corporation Ltd) ಷೇರುಗಳ ಬೆಲೆ ನಿರಂತರವಾಗಿ ಏರುತ್ತಿವೆ. ಮಂಗಳವಾರ ಕೂಡ ಷೇರುಗಳ ಬೆಲೆ 5% ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು. ಅಲ್ಲದೆ, ಈ ಷೇರು ಬೆಲೆ ರೂ 8,838 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿತು.
ಕಳೆದ ನಾಲ್ಕು ವಹಿವಾಟು ದಿನಗಳಿಂದ, ಈ ಸ್ಟಾಕ್‌ ಅಪ್ಪರ್​ ಸರ್ಕ್ಯೂಟ್ ಹಿಟ್​ ಆಗುತ್ತಿದೆ. ಈ ಅವಧಿಯಲ್ಲಿ ಈ ಸ್ಟಾಕ್ ಅಂದಾಜು 23% ರಷ್ಟು ಏರಿಕೆಯಾಗಿದೆ. ಷೇರುಗಳ ಈ ಏರಿಕೆಗೆ ಕಾರಣ ಮೋದಿ ಸರ್ಕಾರದ ಘೋಷಣೆ.
ವಾಸ್ತವವಾಗಿ, ಕಳೆದ ವಾರ ಕೇಂದ್ರ ಸಚಿವ ಸಂಪುಟವು ಎರಡು ಸೆಮಿಕಂಡಕ್ಟರ್ ಪ್ಲಾಂಟ್‌ಗಳನ್ನು ಸ್ಥಾಪಿಸುವ ಟಾಟಾ ಗ್ರೂಪ್‌ನ ಪ್ರಸ್ತಾಪಗಳನ್ನು ಅನುಮೋದಿಸಿದೆ. ಅಂದಿನಿಂದ ಷೇರುಗಳು ಪ್ರತಿದಿನ ಅಪ್ಪರ್ ಸರ್ಕ್ಯೂಟ್ ಹೊಡೆಯುತ್ತಿವೆ.
ಟಾಟಾ ಸಮೂಹದ ಎರಡು ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆ ಪ್ರಸ್ತಾವನೆಗಳಿಗೆ ಕೇಂದ್ರ ಸಚಿವ ಸಂಪುಟ ಕಳೆದ ವಾರ ಅನುಮೋದನೆ ನೀಡಿದೆ. ಈಗ ಟಾಟಾ ಗ್ರೂಪ್‌ನ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯು ತೈವಾನ್‌ನ ಪ್ರಸಿದ್ಧ ಚಿಪ್‌ಮೇಕರ್ – ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪ್ (ಪಿಎಸ್‌ಎಂಸಿ) ಜತೆಗೂಡಿ ಗುಜರಾತ್​ನಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ನಿರ್ಮಿಸಲಿದೆ. ಇದಲ್ಲದೆ, ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಪ್ರೈವೇಟ್ ಲಿಮಿಟೆಡ್ ಅಸ್ಸಾಂನ ಮೊರಿಗಾಂವ್‌ನಲ್ಲಿ 27,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಸ್ಥಾವರವನ್ನು ಸ್ಥಾಪಿಸಲಿದೆ. ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್ ಸಂಸ್ಥೆಯು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿದೆ (ಎನ್‌ಬಿಎಫ್‌ಸಿ). ಇದು ಟಾಟಾ ಗ್ರೂಪ್ ಸೇರಿದಂತೆ ವಿವಿಧ ಕಂಪನಿಗಳ ವಿವಿಧ ಪೋರ್ಟ್‌ಫೋಲಿಯೊಗಳಲ್ಲಿ ಹೂಡಿಕೆ ಮಾಡುತ್ತದೆ.
ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಸಹ ಮಲ್ಟಿಬ್ಯಾಗರ್ ಸ್ಟಾಕ್ ಆಗಿದೆ. ಇದು ಕಳೆದ 3 ತಿಂಗಳಲ್ಲಿ ತನ್ನ ಹೂಡಿಕೆದಾರರಿಗೆ 120% ಕ್ಕಿಂತ ಹೆಚ್ಚು ಆದಾಯವನ್ನು ನೀಡಿದೆ. ಏತನ್ಮಧ್ಯೆ, ಕಳೆದ ಆರು ತಿಂಗಳಲ್ಲಿ ಸ್ಟಾಕ್ 260% ಕ್ಕಿಂತ ಹೆಚ್ಚು, 1 ವರ್ಷದಲ್ಲಿ 336% ಮತ್ತು ಕಳೆದ ಎರಡು ವರ್ಷಗಳಲ್ಲಿ 560% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ವರ್ಷದ ಆರಂಭದಿಂದ ಇದುವರೆಗೆ ಈ ಸ್ಟಾಕ್ 107% ಹೆಚ್ಚಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 44,718.65 ಕೋಟಿ ರೂ. ಇದೆ.

ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಹೂಡಿಕೆ ಇರುವ ಕಂಪನಿಯ ಐಪಿಒಗೆ ಸೆಬಿ ಅನುಮತಿ

5 ರೂಪಾಯಿಯ ಪೆನ್ನಿ ಸ್ಟಾಕ್​ಗೆ ಭರ್ಜರಿ ಡಿಮ್ಯಾಂಡು: 15% ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​

84 ಪೈಸೆಯ ಪೆನ್ನಿ ಸ್ಟಾಕ್​: ಖಾದ್ಯ ತೈಲ ಕಂಪನಿಯ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + 2 =
Remember me
