ನವದೆಹಲಿ:ರಾಜಧಾನಿ ನವದೆಹಲಿಯಲ್ಲಿ ಕೈಗೊಂಡಿರುವ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆ ಭಾಗವಾಗಿರುವ ಹೊಸ ಸಂಸತ್ ಭವನದ ಸಂಕೀರ್ಣ, ನಾಲ್ಕು ಅಂತಸ್ತು ಹೊಂದಲಿದೆ. 120 ಕಚೇರಿಗಳು ಇಲ್ಲಿ ಇರಲಿವೆ.
ಸದನಗಳ ಸಮಿತಿ ಕಚೇರಿ, ಸಂಸದೀಯ ವ್ಯವಹಾರಗಳ ಸಚಿವಾಲಯ, ರಾಜ್ಯಸಭೆ ಮತ್ತು ಲೋಕಸಭಾ ಸಚಿವಾಲಯ, ಪ್ರಧಾನಿಯವರ ಕಚೇರಿ, ಭದ್ರತಾ ಕಚೇರಿ ಮತ್ತು ಸಿಬ್ಬಂದಿ ಕೋಣೆಗಳು, ರೈಲ್ವೆ ಮತ್ತು ವಿಮಾನಯಾನ ಟಿಕೆಟ್ ಬುಕಿಂಗ್ ಕಚೇರಿ, ಎಸ್ಟೇಟ್ ನಿರ್ವಹಣಾ ಕಚೇರಿಗಳು ಹೊಸ ಸಂಸತ್ ಭವನದಲ್ಲಿ ಇರಲಿದೆ ಎಂದು ಸೆಂಟ್ರಲ್ ವಿಸ್ಟಾ ಯೋಜನೆಯ ವಿನ್ಯಾಸ ಮತ್ತು ನಿರ್ವಹಣೆ ಮಾಡುತ್ತಿರುವ ಎಚ್​ಸಿಪಿ ಡಿಸೈನ್ ಸಂಸ್ಥೆ ಹೇಳಿದೆ.
ಹೊಸ ಸಂಸತ್ ಭವನದಲ್ಲಿ ತಲಾ 3 ಸಾವಿರ ಚ.ಅಡಿಯಷ್ಟು ವಿಶಾಲವಾದ ಉಭಯ ಸದನಗಳು ಇರಲಿದ್ದು, ಸ್ಪೀಕರ್ ಮುಂದಿನ ಅಂಗಳ ಕುದುರೆ ಪಾದದ ಆಕಾರದಲ್ಲಿ ಇರಲಿದೆ. ಭವನದಲ್ಲಿ ಪ್ರತಿ ಸಂಸದರಿಗೂ ಕಚೇರಿ, ಗ್ರಂಥಾಲಯ, ಮ್ಯೂಸಿಯಂನಂತೆ ಇರುವ ಕಾನ್​ಸ್ಟಿಟ್ಯೂಷನ್ ಹಾಲ್ ಇರಲಿದೆ. ಇದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ ಎಂದು ಎಚ್​ಸಿಪಿ ಡಿಸೈನ್ ಮಾಹಿತಿ ನೀಡಿದೆ. ನೂತನ ಸಂಸತ್ ಭವನಕ್ಕೆ ಆರು ಪ್ರವೇಶ ದ್ವಾರವಿರಲಿದ್ದು, ರಾಷ್ಟ್ರಪತಿ ಮತ್ತು ಪ್ರಧಾನಿಯವರಿಗೆ ವಿಶೇಷ ಸ್ವಾಗತದ ದ್ವಾರ, ಉಭಯ ಸದನಗಳ ಸಭಾಧ್ಯಕ್ಷರಿಗೆ ಪ್ರತ್ಯೇಕ ದ್ವಾರ, ಸಂಸದರಿಗೆ ಎರಡು ಪ್ರವೇಶದ ಬಾಗಿಲು, ಸಾರ್ವಜನಿಕರಿಗೆ ಎರಡು ಪ್ರವೇಶದ ಬಾಗಿಲುಗಳು ಇರಲಿವೆ. ಹೊಸ ಸಂಸತ್ ಭವನವನ್ನು -ಠಿ; 861.90 ಕೋಟಿ ವೆಚ್ಚದಲ್ಲಿ ಟಾಟಾ ಪ್ರಾಜೆಕ್ಟ್ ನಿರ್ವಿುಸುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
