ನವ ದೆಹಲಿ:ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ (ಸೆ.17) ಹಿನ್ನೆಲೆಯಲ್ಲಿ 1,222 ಉಡುಗೊರೆಗಳನ್ನು ಹರಾಜು ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ತಿಳಿಸಿದ್ದಾರೆ. ಸೆ. 17 ರಿಂದ ಅ.2ರ ತನಕ ಹರಾಜು ಪ್ರಕ್ರಿಯೆ ನಡೆಯಲಿದೆ.
2019ರಲ್ಲಿ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ನಡೆದಿದ್ದು, 1805 ಉಡುಗೊರೆಗಳು ಹರಾಜಾಗಿದ್ದವು. 2021 ರಲ್ಲಿ 2772 ಉಡುಗೊರೆ ಹರಾಜಾಗಿತ್ತು. ಈ ಬಾರಿ 1222 ಉಡುಗೊರೆಗಳನ್ನು ಮೂಲಬೆಲೆ ನಿರ್ಧರಿಸಿ ಹರಾಜಿಗಿಡಲಾಗುತ್ತಿದೆ. ಹರಾಜಾಗುತ್ತಿರುವ ಉಡುಗೊರೆಗಳು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್​​​ನಲ್ಲಿ ಪ್ರದರ್ಶನವಾಗುತ್ತಿದೆ. ಹರಾಜಿನಿಂದ ಬಂದ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ಬಳಸಲಾಗುತ್ತದೆ. pmmementos.gov.in ಮೂಲಕ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.
ಹರಾಜಿನಲ್ಲಿ ವರ್ಣಚಿತ್ರಗಳು, ಶಿಲ್ಪಗಳು, ಕರಕುಶಲ ವಸ್ತುಗಳು ಮತ್ತು ಜಾನಪದ ಕಲಾಕೃತಿಗಳು ಸೇರಿವೆ. ಕಾಶಿ ವಿಶ್ವನಾಥ ಮಂದಿರ, ರಾಮ ಮಂದಿರದ ಮಾದರಿ ಕಲಾಕೃತಿಗಳು ಸಹಿತ ಹರಾಜಿನಲ್ಲಿರಲಿವೆ. 2022ರ ಕಾಮನ್​​ವೆಲ್ತ್​ ಗೇಮ್ಸ್​​, 2022ರ ಥಾಮಸ್​ ಕಪ್ ಚಾಂಪಿಯನ್ಸ್​ಶಿಪ್​​ನಲ್ಲಿ ಬಳಕೆಯಾದ 25 ಕ್ರೀಡಾ ವಸ್ತುಗಳು ಇರಲಿವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
