ನವದೆಹಲಿ:ಸಾಮಾನ್ಯವಾಗಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗಳನ್ನು ಒಂದಕ್ಕೊಂದು ವಿರುದ್ಧವಾದ ಸಂಗತಿಗಳೆಂಬಂತೆ ಬಿಂಬಿಸಲಾಗುತ್ತದೆ. ಆದರೆ ಅಭಿವೃದ್ಧಿಯ ‘ಪಥ’ದಲ್ಲೇ ಪರಿಸರವನ್ನು ಸಂರಕ್ಷಿಸಬಹುದು ಎಂಬುದನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಿರೂಪಿಸುತ್ತಿದ್ದಾರೆ.
ರಾಷ್ಟ್ಯದ ರಾಜಧಾನಿ ನವದೆಹಲಿಯನ್ನು ಹರಿಯಾಣದ ಗುಡ್​ಗಾವ್​ಗೆ ಸೇರಿಸುವ 27.7 ಕಿಲೋಮೀಟರ್ ಉದ್ದದ ದೆಹಲಿ-ಗುಡಗಾವ್ ಎಕ್ಸ್​ಪ್ರೆಸ್​ವೇ, ಆರು ಲೇನ್​ಗಳಿಂದ ಎಂಟು ಲೇನ್​ಗಳನ್ನು ಹೊಂದಿದೆ. ಇಲ್ಲಿ ಇತ್ತೀಚೆಗೆ ನಡೆದ ರಸ್ತೆ ವಿಸ್ತರಣೆ ಕಾಮಗಾರಿಯ ಸಂದರ್ಭದಲ್ಲಿ ಮರಗಳನ್ನು ಕಡಿಯುವ ಬದಲು, ಬೇರೆ ಜಾಗಗಳಿಗೆ ಬೇರು ಸಮೇತ ಸ್ಥಳಾಂತರಿಸುವ ಕೆಲಸ ಮಾಡಿರುವುದಾಗಿ ಗಡ್ಕರಿ ತಿಳಿಸಿದ್ದಾರೆ. ಮರವನ್ನು ಬೇರುಸಮೇತ ತೆಗೆದು ಬೇರೆಡೆಗೆ ಸಾಗಿಸಿ ನೆಡುತ್ತಿರುವ ಕಾರ್ಯದ ವೀಡಿಯೋ ತುಣುಕನ್ನು ಅವರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.
दिल्ली- गुड़गाँव एक्सप्रेसवे के निर्माण के दौरान हमने पेड़ों को बचाने का ख़ास प्रयास किया है। हमने 12,000 पेड़ ट्रांसप्लांट किए हैं और 84% सक्सेस रेट है। यह एक ग्रीन एक्सप्रेस हाइवे होगा।#PragatiKaHighwaypic.twitter.com/7wyXYaoo0L
— Nitin Gadkari (@nitin_gadkari)March 4, 2021

ದೆಹಲಿ-ಗುಡಗಾವ್ ಎಕ್ಸ್​ಪ್ರೆಸ್​ವೇ ಹೆದ್ದಾರಿಯಲ್ಲಿದ್ದ 12,000 ಮರಗಳನ್ನು ಬೇರೆ ಜಾಗಗಳಿಗೆ ಟ್ರಾನ್ಸ್​ಪ್ಲಾಂಟ್ ಮಾಡಲಾಗಿದ್ದು, ಈ ಕಾರ್ಯದಲ್ಲಿ ಶೇ.84 ರಷ್ಟು ಯಶಸ್ಸಿನ ದರವನ್ನು ಸಾಧಿಸಲಾಗಿದೆ. ಹೀಗಾಗಿ ಈ ಹೆದ್ದಾರಿಯು, ಒಂದು ‘ಗ್ರೀನ್ ಎಕ್ಸ್​ಪ್ರೆಸ್​ ಹೈವೇ’ ಆಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಕರೊನಾ ಲಸಿಕೆ ಪಡೆದ ಧರ್ಮಗುರು ದಲೈ ಲಾಮಾ

ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + sixteen =
Remember me
