ಲಖನೌ:ಈ ಹುಡುಗಿ, ತಾಯಿ ಬೈದಿದ್ದಕ್ಕೆ ಆತ್ಮಹತ್ಯೆಗೆ ಮುಂದಾಗಿ ಎಲ್ಲರಿಗೂ ಶಾಕ್​​ ನೀಡಿದ್ದಾಳೆ. ಈಕೆ ಇನ್ನೂ ಪಿಯುಸಿ ಪ್ರಾಯದ ಹುಡುಗಿಯಾಗಿದ್ದು ಸಾಧನೆಗೆ ಬಹಳಷ್ಟು ಅವಕಾಶವಿತ್ತು. ಆದರೆ ತಾಯಿ ಬೇಗ ಏಳುವುದಿಲ್ಲ ಎಂದು ಬೈದಿರುವುದಕ್ಕೆ, ಆತ್ಮ ಹತ್ಯೆ ಮಾಡಿ ಕೊಂಡಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.
12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಲಖನೌನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತನ್ನ ಜೀವನವನ್ನು ಅಂತ್ಯಗೊಳಿಸಿದ್ದು ವರದಿಗಳ ಪ್ರಕಾರ, 12ನೇ ತರಗತಿಯ ವಿದ್ಯಾರ್ಥಿನಿಯು ಬೆಳಿಗ್ಗೆ ತಡವಾಗಿ ಏಳುತ್ತಿದ್ದಳು ಮತ್ತು ಅಧ್ಯಯನ ಮಾಡದಿದ್ದಕ್ಕಾಗಿ ಆಕೆಯ ತಾಯಿ ಗದರಿಸಿದ್ದಾರೆ. ಇದರಿಂದ ದುಃಖಿತಳಾದ ಹುಡುಗಿ, ಆತ್ಮಹತ್ಯೆ ಮಾಡುವ ಹುಚ್ಚು ನಿರ್ಧಾರ ಕೈಗೊಂಡಿದ್ದಾಳೆ. ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
