ಮುಂಬೈ:ಗೌತಮ್ ಅದಾನಿ ಸಮೂಹ ಕಂಪನಿಗಳ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳು ಬರುತ್ತಿವೆ. ಈ ಸರಣಿಯಲ್ಲಿ, ಅದಾನಿ ಎನರ್ಜಿ ಸೋಲುಷನ್ಸ್​ ಲಿಮಿಟೆಡ್ (Adani Energy Solutions Ltd.- AESL) ಜನವರಿ-ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 13.26 ರಷ್ಟು ಕುಸಿದು 381.29 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 439.60 ಕೋಟಿ ರೂ. ಆಗಿತ್ತು. 2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯ ಲಾಭವು 1,195.61 ಕೋಟಿ ರೂಪಾಯಿಗಳಷ್ಟಿದೆ ಎಂದು ಅದಾನಿ ಎನರ್ಜಿ ಸೋಲುಷನ್ಸ್​ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ, ಇದು 2022-23 ರ ಹಣಕಾಸು ವರ್ಷದಲ್ಲಿ ದಾಖಲಿಸಿದ 1,280.60 ಕೋಟಿ ರೂಪಾಯಿಗಳಿಗಿಂತ ಕಡಿಮೆಯಾಗಿದೆ.
2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯವು 4,855.18 ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2022-23ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 3,494.84 ಕೋಟಿ ರೂ. ಆಗಿತ್ತು. 2023-24ರ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ 17,218.31 ಕೋಟಿ ರೂ.ಗಳಾಗಿದ್ದರೆ, 2022-23ರ ಹಣಕಾಸು ವರ್ಷದಲ್ಲಿ ಇದು 13,840.46 ಕೋಟಿ ರೂ. ಇತ್ತು.
ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್‌ನ ಎಂಡಿ ಅನಿಲ್ ಸರ್ದಾನ ಅವರು, “ಹೊಸ ಮಾರ್ಗಗಳನ್ನು ನಿಯೋಜಿಸುವಲ್ಲಿ ಕಂಪನಿಯ ಮುಂದುವರಿದ ಪ್ರಗತಿ, ಬಲವಾದ ಇಂಧನ ಬೇಡಿಕೆ ಮತ್ತು ಆಸಕ್ತಿಯ ಕ್ಷೇತ್ರಗಳಲ್ಲಿ ಮಾರುಕಟ್ಟೆ ಅವಕಾಶಗಳನ್ನು ಗುರುತಿಸುವ ಮತ್ತು ಬಳಸಿಕೊಳ್ಳುವ ನಮ್ಮ ಸಾಮರ್ಥ್ಯವು ನಮ್ಮ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ಭಾರತದ ಶಕ್ತಿ ಪರಿವರ್ತನೆಯ ಮುಂಚೂಣಿಯಲ್ಲಿದೆ” ಎಂದಿದ್ದಾರೆ.
ಅದಾನಿ ಎನರ್ಜಿ ಸೊಲ್ಯೂಷನ್ಸ್ ಷೇರು ಬೆಲೆ ಮಂಗಳವಾದಂದು ಶೇ. 0.4ರಷ್ಟು ಏರಿಕೆಯಾಗಿ, ರೂ. 1065.20 ತಲುಪಿತು.
ವೆಂಚುರಾ ಸೆಕ್ಯುರಿಟೀಸ್ ಬ್ರೋಕರೇಜ್​ ಸಂಸ್ಥೆಯು ಇತ್ತೀಚೆಗೆ ಅದಾನಿ ಎನರ್ಜಿ ಸೊಲ್ಯೂಷನ್ಸ್ ಷೇರುಗಳನ್ನು 1,600 ರೂ. ಗುರಿ ಬೆಲೆಯೊಂದಿಗೆ ಖರೀದಿಸಲು ಸಲಹೆ ನೀಡಿದೆ.

404ರಿಂದ 26 ರೂಪಾಯಿಗೆ ಕುಸಿದ ಬ್ಯಾಂಕ್​ ಷೇರುಗಳ ಬೆಲೆ: ಬ್ರೋಕರೇಜ್​ ಸಂಸ್ಥೆಗಳು ಹೇಳುವುದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eleven =
Remember me
