ಮಹಾರಾಷ್ಟ್ರ:ಲೋನಾವಾಲಾದಲ್ಲಿ ನಡೆಯುತ್ತಿದ್ದ ಅಶ್ಲೀಲ ವಿಡಿಯೋ ದಂಧೆಯನ್ನು ಭೇದಿಸಲಾಗಿದ್ದು, ಈ ಸಂಬಂಧ ಪುಣೆ ಗ್ರಾಮೀಣ ಪೊಲೀಸರು 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!
ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಮಾಡುವ ಉದ್ದೇಶದಿಂದ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಲು ಯುವಕರ ಗುಂಪು ಲೋನಾವಾಲಾದಲ್ಲಿ ಹಲವು ವಿಲ್ಲಾಗಳನ್ನು ಬಾಡಿಗೆಗೆ ಪಡೆದಿತ್ತು ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಯುವಕರು ಮತ್ತು ಯುವತಿಯರ ಗುಂಪು ವಿಲ್ಲಾಗಳನ್ನು ಬಾಡಿಗೆಗೆ ಪಡೆಯುತ್ತಿರುವುದು ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಸ್ಥಳೀಯರಿಂದ ಪೊಲೀಸರಿಗೆ ದೂರ ಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು 13 ಜನರನ್ನು ಬಂಧಿಸಿ ಹಲವು ಅಶ್ಲೀಲ ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 15 ಯುವಕರನ್ನು ಗುರುತಿಸಲಾಗಿದೆ. ಹಲವು ರಾಜ್ಯಗಳ ಯುವಕ ಯುವತಿಯರು ಇಲ್ಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ದಾಳಿ ವೇಳೆ ಅಶ್ಲೀಲ ವಿಡಿಯೋವನ್ನು ಚಿತ್ರೀಕರಣ ಕಂಡು ಬಂದಿದೆ. ದಾಳಿ ವೇಳೆ ಕೆಲ ಯುವಕರು ಪರಾರಿಯಾಗಿದ್ದರೆ ಇನ್ನೂ ಕೆಲವರು ಅಶ್ಲೀಲ ಚಿತ್ರೀಕರಣ ನಡೆಸುತ್ತಿದ್ದರು ಎನ್ನಲಾಗಿದ್ದ ಅಲ್ಲಿಯವರೆಗೆ ಚಿತ್ರೀಕರಿಸಿದ ವಿಡಿಯೋ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲೋನಾವಾಲಾ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತ್ಯಸಾಯಿ ಕಾರ್ತಿಕ್ ಅವರ ಮೇಲ್ವಿಚಾರಣೆಯಲ್ಲಿ ಲೋನಾವಾಲಾ ಪೊಲೀಸರು ಆರೋಪಿಗಳಿಂದ ಅಶ್ಲೀಲ ಚಿತ್ರಗಳ ಚಿತ್ರೀಕರಣಕ್ಕೆ ಬಳಸಲಾದ 6.72 ಲಕ್ಷ ರೂ.ಮೌಲ್ಯದ ಕ್ಯಾಮೆರಾಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಅಶ್ಲೀಲ ಚಲನಚಿತ್ರಗಳನ್ನು ನೋಡಲು ಆಸಕ್ತಿ ಹೊಂದಿರುವ ಜನರಿಂದ ಚಂದಾದಾರಿಕೆ ಶುಲ್ಕ ಪಡೆಯುವ ಮೂಲಕ ಆರೋಪಿಗಳು ಹಣವನ್ನು ಸಂಪಾದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 292, 293, 34 ಮುಂತಾದ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಂಗಲೆಯಲ್ಲಿ ಅಶ್ಲೀಲ ಚಿತ್ರಗಳ ಶೂಟಿಂಗ್‌ ನಡೆಯುತ್ತಿರುವುದು ಗೊತ್ತಿದ್ದೂ ಅವರು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನ್ನದು ಪಕ್ಕಾ ಲವ್‌ ಮ್ಯಾರೇಜ್‌, ಆದರೆ ಒಂದು ಕಂಡೀಷನ್….: ನಟ ವಿಜಯ್​ ಮನದಾಳದ ಮಾತು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × one =
Remember me
