ನವದೆಹಲಿ:ಮಿಚಾಂಗ್ ಚಂಡಮಾರುತವು ತೆಲುಗು ರಾಜ್ಯಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹಲವೆಡೆ ಬೆಳೆ ಮುಳುಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಇನ್ನು ಕೆಲವೆಡೆ ಮೂಕ ಜೀವಿಗಳು ಸಾವನ್ನಪ್ಪಿವೆ. ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಮಂಡಲದ ಕಿಷ್ಟಾಪುರಂನಲ್ಲಿ ಚಳಿ ಮತ್ತು ಮಳೆಯಿಂದಾಗಿ ಸುಮಾರು 13 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ. ಹಾನಿಯನ್ನು ತಾಳಲಾರದೆ ವೃದ್ಧೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಆದಿಲಕ್ಷ್ಮಿ (67) ಮೃತ ಮಹಿಳೆ. ಆಂಧ್ರದ ಎನ್ ಟಿಆರ್ ಜಿಲ್ಲೆಯ ಜಗ್ಗಾಯಪೇಟೆಯ ನಿವಾಸಿಯಾಗಿದ್ದಾರೆ. 2 ತಿಂಗಳ ಹಿಂದೆ ಬಾತುಕೋಳಿ ಸಾಕಣೆಗಾಗಿ ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ತುಪಲ್ಲಿ ಮಂಡಲದ ಕಿಷ್ಟಾಪುರಕ್ಕೆ ಬಂದಿದ್ದರು. ಗ್ರಾಮದ ಹೊರವಲಯದಲ್ಲಿ ಸುಮಾರು 15 ಸಾವಿರ ಬಾತುಕೋಳಿಗಳನ್ನು ಸಾಕುತ್ತಾ ಜೀವನ ನಡೆಸುತ್ತಿದ್ದರು. ಚಂಡಮಾರುತದಿಂದಾಗಿ ಮಂಗಳವಾರ ಮಧ್ಯರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯಿತು. ಇದರಿಂದಾಗಿ  ಸಾಕಿದ್ದ ಸುಮಾರು 13 ಸಾವಿರ ಬಾತುಕೋಳಿಗಳು ಸಾವನ್ನಪ್ಪಿವೆ.
ಬಾತುಕೋಳಿ ಸಾವನ್ನಪ್ಪರುವುದರಿಂದ ಕುಟುಂಬಕ್ಕೆ ಆಘಾತವಾಗಿತ್ತು. ಸುಮಾರು 15 ಲಕ್ಷ ರೂ. ನಷ್ಟವಾಗಿತ್ತು. ಸತ್ತ ಬಾತುಕೋಳಿಗಳನ್ನು ನೋಡಿದ ಕುಟುಂಬಸ್ಥರು, ಹಾನಿಯ ಆತಂಕದಲ್ಲಿದ್ದರು. ಆದರೆ ಆದಿಲಕ್ಷ್ಮಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಂತ್ರಸ್ತರಿಂದ ವಿವರ ಸಂಗ್ರಹಿಸಿದ್ದಾರೆ. ಸರ್ಕಾರದಿಂದ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.
ಧರ್ಮಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡಿದ ಬಿಗ್ ಬಾಸ್ ಪ್ರೇಮ ಪಕ್ಷಿಗಳು..!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
