ಬಿಹಾರ:13 ವರ್ಷದ ಬಾಲಕಿಯೊಬ್ಬಳು ಪ್ರಿಯಕರನ ಸಹಾಯದಿಂದ ತನ್ನ ತಂಗಿಯ ಜೀವ ತೆಗೆದು, ಆಕೆಯನ್ನು ಆಸಿಡ್​ನಿಂದ ಸುಟ್ಟು ಹಾಕಿರುವ ಭೀಕರ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಜಂಡಹಾಳ ಬ್ಲಾಕ್​ನಲ್ಲಿ ನಡೆದಿದೆ. ಶವದ ಅವಶೇಷಗಳನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ!
ಘಟನೆ ಸಂಬಂಧ ಇಬ್ಬರು ಬಾಲ ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ ಬಳಿಕ ಒಂಬತ್ತು ವರ್ಷದ ಬಾಲಕಿಯ ಶವವನ್ನು ಮನೆಯೊಳಗಿನ ಪೆಟ್ಟಿಗೆಯಲ್ಲಿಟ್ಟಿದ್ದರು. ದೇಹ ಕೊಳೆತು ದುರ್ವಾಸನೆ ಬರುತ್ತಿದ್ದಂತೆ ಅದನ್ನು ಕತ್ತರಿಸಿ ಆಸಿಡ್​ನಿಂದ ಸುಟ್ಟು ಮನೆಯ ಹಿತ್ತಲಿಗೆ ಎಸೆದಿದ್ದಾರೆ. ಘಟನೆ ನಡೆದ ವೇಳೆ ಬಾಲಕಿಯರ ತಂದೆ ಮನೆಯಲ್ಲಿ ಇರಲಿಲ್ಲ. ಆತ ಕೆಲಸಕ್ಕೆಂದು ಹೊರಗಡೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯದ ಕುರಿತು ಪೊಲೀಸರು ಆರೋಪಿಗಳನ್ನು ವಿಚಾರಿಸಿದಾಗ, ತಾನು ಮತ್ತು ತನ್ನ ಪ್ರಿಯಕರ ಖಾಸಗಿ ಕ್ಷಣಗಳನ್ನು ಕಳೆಯುವ ವೇಳೆ ತಂಗಿ ಅದನ್ನು ನೋಡಿದ್ದಳು. ಈ ವೇಳೆ ಹೆದರಿಕೆಯಿಂದ ಆಕೆಯನ್ನು ಜೀವವನ್ನು ತೆಗೆಯಲಾಯಿತು ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
