ಚೆನ್ನೈ:ಹಬ್ಬದ ಸಂದರ್ಭದಲ್ಲಿ ಎತ್ತಿನ ಬಂಡಿಯಲ್ಲಿಟ್ಟಿದ್ದ ಜನರೇಟರ್​ಗೆ ಕೂದಲು ಸಿಲುಕಿ 13 ವರ್ಷದ ಅಪ್ರಾಪ್ತೆಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ.
ಮೃತ ಹುಡುಗಿಯನ್ನು ಲಾವಣ್ಯ ಎಂದು ಗುರುತಿಸಲಾಗಿದೆ. ಈಕೆ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಇದನ್ನೂ ಓದಿ:ಸೋಮಣ್ಣ ಬಿಸಿ ತಣಿಸಿದ ಹೈಕಮಾಂಡ್: ದಿಲ್ಲಿ ಯಾತ್ರೆ ಸಕ್ಸಸ್, ವರಿಷ್ಠರಿಂದ ಸಮಾಧಾನ; ಮತ್ತೆ ಸ್ಪರ್ಧೆ ಖಚಿತ
ಡೀಸೆಲ್​ ಚಾಲಿತ ಜನರೇಟರ್​ ಅನ್ನು ಎತ್ತಿನ ಬಂಡಿಯಲ್ಲಿ ಇಡಲಾಗಿತ್ತು. ಅದೇ ಎತ್ತಿನ ಗಾಡಿಯಲ್ಲಿ ಹುಡುಗಿ ಇರುವಾಗ ಜನರೇಟ್​ನ ಸಣ್ಣ ಫ್ಯಾನ್​ಗೆ ಕೂದಲು ಸಿಲುಕಿದೆ. ಆದರೆ, ಸ್ಥಳದಲ್ಲಿ ಭಾರೀ ಶಬ್ದ ಇದ್ದಿದ್ದರಿಂದ ಬಾಲಕಿ ಅಳುವುದು ಯಾರಿಗೂ ಗೊತ್ತಾಗಲಿಲ್ಲ. ಜನರೇಟರ್​ ಸ್ವಿಚ್​ ಆಫ್​ ಮಾಡಿದಾಗ ಮಾತ್ರ ಬಾಲಕಿ ಅಳುವುದು ಕೇಳಿಸಿದೆ.
ಬಾಲಕಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಂದು ಕಾಂಚಿಪುರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಬಾಲಕಿಯ ಪ್ರಾಣವನ್ನು ಉಳಿಸಲು ಆಗಲಿಲ್ಲ. ಈ ಕುರಿತು ಮಗರಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನರೇಟರ್ ಆಪರೇಟರ್ ಮುನಿಸಾಮಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ಮನೆ ಮಗನಿಗೆ ವಿಷ ಕೊಡಬೇಡಿ, ಹಾಲು ಕೊಡಿ;  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ
ಲಾವಣ್ಯ ಅವರ ತಾಯಿ ಮೂರು ತಿಂಗಳ ಹಿಂದಷ್ಟೇ ನಿಧನರಾಗಿದ್ದರು. ಆಕೆಯ ತಂದೆ ಸರವಣನ್ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ತನ್ನ ಸಹೋದರ ಭುವನೇಶ್ ಜೊತೆಗೆ ತನ್ನ ಅಜ್ಜಿಯರ ಜೊತೆ ವಾಸಿಸುತ್ತಿದ್ದಳು.(ಏಜೆನ್ಸೀಸ್​)
ಎಲ್ಲವನ್ನೂ ಅನುಭವಿಸಿಯೇ ಒಪ್ಪಬೇಕಾ?

ಸೋಮಣ್ಣ ಬಿಸಿ ತಣಿಸಿದ ಹೈಕಮಾಂಡ್: ದಿಲ್ಲಿ ಯಾತ್ರೆ ಸಕ್ಸಸ್, ವರಿಷ್ಠರಿಂದ ಸಮಾಧಾನ; ಮತ್ತೆ ಸ್ಪರ್ಧೆ ಖಚಿತ

ಸಂಸ್ಕಾರಕ್ಕೆ ಮಾನ್ಯತೆ: ಮನೋಲ್ಲಾಸ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fifteen + 16 =
Remember me
