ಮಲಪ್ಪುರಂ:ಸಂಬಂಧಿ ಯುವಕನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಯೊಬ್ಬಳು ಮನನೊಂದು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಕೇರಳದ ಮೆಲತ್ತೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಮುಹಮ್ಮದ್​ ರಫೀಕ್​ (21) ಎಂದು ಗುರುತಿಸಲಾಗಿದೆ. ಈತ ಚೆರ್ಪಲಸ್ಸೆರಿಯಲ್ಲಿರುವ ನೆಲ್ಲಯಾ ಪೊಟ್ಟಚಿರಾ ಮೂಲದ ನಿವಾಸಿ. 13 ವರ್ಷದ ತನ್ನ ಸಂಬಂಧಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಅಪ್ರಾಪ್ತೆ ಜನವರಿ 12ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರಂಭದಲ್ಲಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿತ್ತು. ಬಳಿಕ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಅನೇಕ ಬಾರಿಗೆ ಬಾಲಕಿಯ ಮನೆಗೆ ಬರುತ್ತಿದ್ದ ರಫೀಕ್​, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಇದರಿಂದ ಮನನೊಂದು ಬಾಲಕಿ ಸಾವಿನ ಹಾದಿ ಹಿಡಿದಿದ್ದಾಳೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.(ಏಜೆನ್ಸೀಸ್​)
ಲಕ್ಷಾಂತರ ಟೆಕ್ಕಿಗಳು ಲೇ ಆಫ್: ಅಗ್ರ ಸ್ಥಾನದಲ್ಲಿ ಗೂಗಲ್​, ಇನ್ನಷ್ಟು ಟೆಕ್ಕಿಗಳು ಸಂತ್ರಸ್ತರಾಗುವ ಭೀತಿ

ಇಪ್ಪತ್ತು ವಸಂತಗಳನ್ನು ಸಾಗಿ ಬಂದ ಚಿಣ್ಣರಬಿಂಬ: ಮಕ್ಕಳ ಕಾಳಜಿ, ಭವ್ಯ ರಾಷ್ಟ್ರ ನಿರ್ಮಾಣದ ಗುರಿ

ಸಿಡಿಯಿತು ಸೂರ್ಯನ ಭಾಗ! ಅತ್ಯಪರೂಪದ ವಿದ್ಯಮಾನ, ವಿಜ್ಞಾನಿಗಳಿಂದ ಕಾರಣ ಶೋಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + sixteen =
Remember me
