ಹೈದರಾಬಾದ್​:ಕರೊನಾ ಲಾಕ್​ಡೌನ್​ ವೇಳೆ ಮನೆಗೆ ಬಂದಿದ್ದ 13 ವರ್ಷದ ಮಗಳ ಮೇಲೆ ಹೆತ್ತಪ್ಪನೇ ಅತ್ಯಾಚಾರವೆಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದುವರೆಗೂ ನಾಲ್ಕು ಮದುವೆ ಆಗಿರುವ ಕಾಮರೂಪಿ ತಂದೆ ಅಪ್ತಾಪ್ತ ವಯಸ್ಸಿನ ಮಗಳನ್ನೂ ಬಿಟ್ಟಿಲ್ಲ. ಬಾಲಕಿಯನ್ನು ಬಲವಂತವಾಗಿ ನಿತ್ಯ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದು, ವಿಷಯ ಹೊರ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಎರಡು ತಿಂಗಳ ಬಳಿಕ ಮಲತಾಯಿ ಬಳಿ ಬಾಲಕಿ ತನ್ನ ಮೇಲಾಗುತ್ತಿರುವ ದೌರ್ಜನ್ಯ ಹೇಳಿಕೊಂಡಿದ್ದು, ಮಲತಾಯಿಯೇ ಖುದ್ದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿರಿಪ್ರಿಯಕರನ ವಂಚನೆಯನ್ನು ಫೇಸ್‌ಬುಕ್‌ನಲ್ಲೂ ತೋಡಿಕೊಂಡಿದ್ದ ನಟಿ ಚಂದನಾ
ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಕರಣಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, 37 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಈತ ಒಟ್ಟು ನಾಲ್ಕು ಮದುವೆ ಆಗಿದ್ದಾನೆ. ಮೊದಲ ಮತ್ತು ಎರಡನೇ ವಿವಾಹ ವಿಚ್ಛೇದನ ಆಗಿದೆ. ಇನ್ನು ಮೂರನೇ ಹೆಂಡತಿ ತೀರಿಕೊಂಡಿದ್ದಾಳೆ. ನಾಲ್ಕನೇ ಹೆಂಡತಿ ಇದ್ದಾರೆ. ಅತ್ಯಾಚರಕ್ಕೊಳಗಾದ ಬಾಲಕಿ ಮೂರನೇ ಹೆಂಡತಿಯ ಮಗಳು. ಆರೋಪಿ 4ನೇ ಪತ್ನಿ, ಮಗ, ಮತ್ತು ತಾಯಿ ಜತೆ ವಾಸವಿದ್ದ. ಮಗಳು ಬೇರೆ ಜಿಲ್ಲೆಯ ಧಾರ್ಮಿಕ ಶಾಲೆಯಲ್ಲಿ ಓದುತ್ತಿದ್ದಳು.
ಇದನ್ನೂ ಓದಿರಿಪ್ರಿಯಕರನ ಹೆಸರು ‘ಕಚಡಾ ಲೋಫರ್’ ಎಂದು ಸೇವ್ ಮಾಡಿಕೊಂಡಿದ್ದ ನಟಿ ಚಂದನಾ!
ಮಾರ್ಚ್‌ನಲ್ಲಿ ಕರೊನಾ ಪರಿಣಾಮ ಶಿಕ್ಷಣ ಸಂಸ್ಥೆಗಳು ಬಂದ್​ ಆಗಿದ್ದರಿಂದ ಬಾಲಕಿ ಮನೆಗೆ ಮರಳಿದ್ದಳು. ಆಗಿನಿಂದ ಮಗಳ ಮೇಲೆ ತಂದೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಯಾರಿಗೂ ವಿಷಯ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಈತನ ಕೃತ್ಯ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಮನೆಯಲ್ಲಿ ನಡೆದ ಹಬ್ಬದ ಹಿಂದಿನ ದಿನವೂ ಲೈಂಗಿಕ ದೌರ್ಜನ್ಯವೆಸಗಿದ್ದು, ಹಿಂಸೆ ಸಹಿಸಲಾಗದೆ ತನ್ನ ಮಲತಾಯಿ ಬಳಿ ಸಂತ್ರಸ್ತೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ.
ಕೂಡಲೇ ಸಂತ್ರಸ್ತೆಯ ತಾಯಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 375 (ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)
ಇದನ್ನೂ ಓದಿರಿಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಿದ್ದರಾಮಯ್ಯ ಆಪ್ತರ ಬೇಸರ; ಕಾಂಗ್ರೆಸ್​​ನಲ್ಲೂ ಅಸಮಾಧಾನದ ಹೊಗೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen + 17 =
Remember me
