ಮುಂಬೈ:ಮಹಾರಾಷ್ಟ್ರದ ರಾಯಗಢ, ರತ್ನಗಿರಿ ಜಿಲ್ಲೆ ಸೇರಿದಂತೆ ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ಭಾಗದಲ್ಲಿ ಭಾರಿ ಮಳೆ ಸುರಿದಿದ್ದು, 48 ಗಂಟೆಗಳಲ್ಲಿ 130ಕ್ಕೂ ಅಧಿಕ ಮಂದಿ ಮೃತಪಟ್ಟು ನೂರಾರು ಜನರು ನಾಪತ್ತೆಯಾಗಿದ್ದಾರೆ. ರಾಯಗಢ ಜಿಲ್ಲೆಯ ತಲಾಯಿ ಗ್ರಾಮದಲ್ಲಿ ಭೂಕುಸಿತದಿಂದ 43 ಜನ ಸಾವಿಗೀಡಾಗಿದ್ದಾರೆ. ಹಲವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ರಾಯಗಢ, ರತ್ನಗಿರಿ ಜಿಲ್ಲೆಗಳಲ್ಲಿ ಹಳ್ಳಿಗಳಿಗೆ ಸಂರ್ಪಕ ಕಡಿತಗೊಂಡಿದೆ. 24 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಇನ್ನೊಂದು ಕಡೆ ಸಂಭವಿಸಿದ ಭೂಕುಸಿತದಲ್ಲಿ ನಾಲ್ಕು ಶವಗಳು ದೊರೆತಿವೆ. ಮತ್ತೊಂದು ಅನಾಹುತದ ಸ್ಥಳದಲ್ಲಿ 30 ಜನರು ಅವಶೇಷದಡಿ ಸಿಲುಕಿರುವ ಶಂಕೆ ಇದೆ. ಸತಾರಾ ಜಿಲ್ಲೆಯ ಮಿರಗಾಂವ್​ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 12 ಮೃತಪಟ್ಟಿದ್ದಾರೆ. ಇದೇ ಜಿಲ್ಲೆಯ ಅಂಬೆಗರ್​ನ ಅವಶೇಷದಲ್ಲಿ 12 ಜನರು ಸಿಲುಕಿರುವ ಶಂಕೆ ಇದೆ. ಮುಂಬೈನ ಗೋವಾನಂದಿ ಪ್ರದೇಶದಲ್ಲಿ ಮನೆ ಕುಸಿತದ ಪರಿಣಾಮ 4 ಮಂದಿ ಮೃತಪಟ್ಟಿದ್ದಾರೆ. ಏಳು ಮಂದಿಗೆ ಗಾಯವಾಗಿದೆ. ಕೊಲ್ಹಾಪುರ ಜಿಲ್ಲೆಯಲ್ಲಿ ನದಿ ಪ್ರವಾಹಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ. ಭೂ, ವಾಯು ಮತ್ತು ನೌಕಾ ಪಡೆಯ ಹೆಲಿಕಾಪ್ಟರ್​ಗಳು, ಯೋಧರ ತಂಡ, ಸ್ಥಳೀಯ 12 ರಕ್ಷಣಾ ತಂಡ, ಕರಾವಳಿ ಭದ್ರತಾ ಪಡೆಯ ಎರಡು, ಎನ್​ಡಿಆರ್​ಎಫ್​ನ ಮೂರು ತಂಡಗಳು ರಾಜ್ಯದಲ್ಲಿ ಪರಿಹಾರ ಕಾರ್ಯ ಕೈಗೊಂಡಿವೆ. ಮಹಾರಾಷ್ಟ್ರದಲ್ಲಿ ಈ ಜುಲೈನಲ್ಲಿ ಕಳೆದ ನಾಲ್ಕು ದಶಕದಲ್ಲೇ ಅತ್ಯಧಿಕ ಮಳೆಯಾಗಿದೆ ಎಂದಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ರಾಜ್ಯದ ಹಲವೆಡೆ ರೆಡ್ ಅಲರ್ಟ್ ಘೋಷಿಸಿದೆ.
ಮುಳುಗಿದ ಚಿಪ್ಲುನ್ ಪಟ್ಟಣ:ರತ್ನಗಿರಿ ಜಿಲ್ಲೆಯ ಚಿಪ್ಲುನ್​ನಲ್ಲಿ 24 ತಾಸು ಧಾರಾಕಾರ ಮಳೆ ಸುರಿದ ಪರಿಣಾಮ ವಾಶಿಷ್ಠಿ ನದಿ ಉಕ್ಕೇರಿದ್ದು, 12 ಅಡಿಯಷ್ಟು ನೀರು ಪಟ್ಟಣದಲ್ಲಿ ನಿಂತು ರಸ್ತೆ, ಮನೆಗಳು ಮುಳುಗಿವೆ. ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಕಡಿತವಾಗಿದೆ. ಪಟ್ಟಣದ ಕೋವಿಡ್ ಆರೈಕೆ ಕೇಂದ್ರ ಜಲಾವೃತಗೊಂಡಿದ್ದು, ರೋಗಿಗಳನ್ನು ಬೋಟ್ ಮೂಲಕ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಚಿಪ್ಲುನ್ ಬಳಿಯ ಮಿಜೋಲಿ ಹಳ್ಳಿಯಲ್ಲಿ ಭೂಕುಸಿತದಲ್ಲಿ ಸಿಲುಕಿದ್ದ 56 ಮಂದಿಯನ್ನು ರಕ್ಷಿಸಲಾಗಿದೆ. ಚಿಪ್ಲುನ್​ನಲ್ಲಿ ಪ್ರವಾಹದಿಂದ ರೈಲು ಹಳಿಗಳಿಗೆ ಹಾನಿಯಾಗಿದ್ದು, ಇದರಿಂದ ಕೊಂಕಣ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ. ಕೋಲ್ಕೆವಾಡಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಚಿಪ್ಲುನ್​ನಲ್ಲಿ 8 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ.
ಠಾಕ್ರೆ ಜತೆ ಮೋದಿ, ಷಾ ಚರ್ಚೆ:ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಜತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಮಾತನಾಡಿದ್ದು, ಮಹಾರಾಷ್ಟ್ರಕ್ಕೆ ಎಲ್ಲ ಅಗತ್ಯ ನೆರವನ್ನು ಕೇಂದ್ರ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದೆ.
ಕರೊನಾ ಹೊಡೆತದಿಂದ ಸುಧಾರಿಸಿಕೊಳ್ಳುತ್ತಿರುವ ರಾಜ್ಯದಲ್ಲಿ ಮಳೆ, ನೆರೆ ಹಾವಳಿ ಉಂಟಾಗಿದೆ. ಈ ಉಭಯ ಸಂಕಷ್ಟ ಸಮಯದಲ್ಲಿ ತೊಂದರೆಗೆ ಸಿಲುಕಿಕೊಂಡವರ ತುರ್ತು ರಕ್ಷಣೆಯ ಜತೆಗೆ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಸವಾಲು ಎದುರಾಗಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದೇವೆ.
|ಉದ್ಧವ್ ಠಾಕ್ರೆಮಹಾರಾಷ್ಟ್ರ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
