ಜಾರ್ಖಂಡ್​:ಇಲ್ಲಿನ 130 ವರ್ಷ ಹಳೆಯ ಶಾಲೆಯೊಂದರ ಕಟ್ಟಡ ಧ್ವಂಸಗೊಂಡಿದ್ದು, ಮಕ್ಕಳು ಮೂಲಭೂತ ಸೌಕರ್ಯ ಸಿಗದೆ ಹಾಗೂ ನಡೆದಾಡುವ ಅಂಗಳದಲ್ಲಿ ಪಾಠ ಕೇಳುವ ದುಸ್ಥಿತಿ ನೆನೆದು ಶಾಲೆಯ ಶಿಕ್ಷಕಿ ಕಣ್ಣೀರಿಟ್ಟಿದ್ದಾರೆ. 130 ವರ್ಷಗಳ ಇತಿಹಾಸ ಹೊಂದಿರುವ ಈ ಸ್ಕೂಲ್​ನ ಗೋಡೆಗಳು ಕುಸಿದಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಶಾಲೆಗೆ ಹಾಜರಾಗುತ್ತಾರೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿರುವ ಈ ಶಾಲೆ ಇದೀಗ ಅಳಿವಿನಂಚಲ್ಲಿರುವುದು ತೀರ ಶೋಚನೀಯ.
ಇದನ್ನೂ ಓದಿ:ಕೊಲ್ಕತ್ತ ಹತ್ಯೆ ಕೇಸ್​ಗೆ ಹೊಸ ಟ್ವಿಸ್ಟ್​! ಬೆಚ್ಚಿಬೀಳಿಸುವಂತಿದೆ ಮೃತ ವೈದ್ಯೆ ತಂದೆ ಬಿಚ್ಚಿಟ್ಟ ಸಂಗತಿ
ಜಾರ್ಖಂಡ್ ಸರ್ಕಾರವು 2019ರಲ್ಲಿ ಆರು ತರಗತಿ ಕೊಠಡಿಗಳನ್ನು ನೆಲಸಮಗೊಳಿಸಿದ್ದು, ಅವುಗಳನ್ನು ಮರುನಿರ್ಮಾಣ ಮಾಡುವ ಭರವಸೆ ನೀಡಿ, ಧ್ವಂಸ ಮಾಡಿತ್ತು. ಆದ್ರೆ, ಇಲ್ಲಿಯವರೆಗೂ ಯಾರು ಕೂಡ ಇತ್ತ ತಿರುಗಿ ನೋಡಿಲ್ಲ, ಕೊಟ್ಟ ಭರವಸೆ ಕೇವಲ ಭರವಸೆಯಾಗಿಯೇ ಉಳಿದುಹೋಗಿದೆ. ಇಲ್ಲಿ ಹಿಂದಿ, ಇಂಗ್ಲೀಷ್, ಗಣಿತ ಪಾಠ ಸಿಗುತ್ತಿಲ್ಲ ಎಂಬುದು ಸಮಸ್ಯೆಯಾಗಿಲ್ಲ, ಬದಲಿಗೆ ಇಂತಹ ದುಸ್ಥಿತಿಯಲ್ಲಿ ಮಕ್ಕಳು ಹೇಗೆ ಪಾಠ ಕಲಿಯಬೇಕು? ಇಂದು, ನಾಳೆ ಕುಸಿದುಬೀಳುವ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಶಿಕ್ಷಣ ಪಡೆಯಬೇಕು ಎಂದು ಪರಿಸ್ಥಿತಿ ನೆನೆದು ಶಿಕ್ಷಕಿ ಭಾವುಕರಾಗಿದ್ದಾರೆ.
ಕಟ್ಟಡ ಕೆಡವಿ ಇಂದಿಗೆ ಐದು ವರ್ಷಗಳೇ ಕಳೆದಿವೆ. ಮಕ್ಕಳು ಹೊರಗೆ ಅಥವಾ ವರಾಂಡಾದಲ್ಲಿ ಕುಳಿತು ಪಾಠ ಕೇಳ್ತಿದ್ದಾರೆ. ಮಳೆ, ಗಾಳಿಯನ್ನು ಲೆಕ್ಕಿಸದೆ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಇದೇ ವಿಷಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರದಲ್ಲಿ ಬರೆದು ಅವರ ಕಛೇರಿಗೆ ರವಾನಿಸಲಾಗಿದೆ.
ಇದನ್ನೂ ಓದಿ:ಆ್ಯಂಬುಲೆನ್ಸ್​ನಲ್ಲೇ ಪತ್ನಿಗೆ ಲೈಂಗಿಕ ಕಿರುಕುಳ: ರೋಗಿ ಪತಿ ಕಥೆ ಏನಾಯ್ತು ನೋಡಿ..!
ಆರಂಭದಲ್ಲಿ 1ರಿಂದ 8ನೇ ತರಗತಿಯವರೆಗೆ ಎಂಟು ತರಗತಿ ಕೊಠಡಿಗಳನ್ನು ಶಾಲೆ ಹೊಂದಿತ್ತು. ಆದರೆ 2019ರಲ್ಲಿ ಜಾರ್ಖಂಡ್ ಸರ್ಕಾರವು ಆರು ಕೊಠಡಿಗಳನ್ನು ನೆಲಸಮಗೊಳಿಸಿದ ಕಾರಣ ಸದ್ಯ ಯಾವುದೇ ಕೊಠಡಿಗಳು ಲಭ್ಯವಿಲ್ಲ. ಅಂದಿನಿಂದ ಇಂದಿನವರೆಗೆ ಒಬ್ಬ ಅಧಿಕಾರಿ ಕೂಡ ಇತ್ತ ತಲೆಹಾಕಿಲ್ಲ ಎಂದು ಶಿಕ್ಷಕಿ ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).
ಸರ್ಕಾರಕ್ಕೆ ಧೋನಿ, ವಿರಾಟ್​ ಕಟ್ಟಿದ ತೆರಿಗೆ ಮೊತ್ತ ಎಷ್ಟು ಗೊತ್ತಾ? ಕೇಳಿದ್ರೆ ಹುಬ್ಬೇರೋದು ಖಚಿತ!

ಕೊಲ್ಕತ್ತ ಹತ್ಯೆ ಕೇಸ್​ಗೆ ಹೊಸ ಟ್ವಿಸ್ಟ್​! ಬೆಚ್ಚಿಬೀಳಿಸುವಂತಿದೆ ಮೃತ ವೈದ್ಯೆ ತಂದೆ ಬಿಚ್ಚಿಟ್ಟ ಸಂಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
