ಉಜ್ಜೈನಿ:ಮಧ್ಯಪ್ರದೇಶದಲ್ಲಿ ಭೈರವ ಅಷ್ಟಮಿಯ ಪ್ರಯುಕ್ತ, ಉಜ್ಜೈನಿಯ ಭಗ್ತಿಪುರದಲ್ಲಿರುವ ಕಾಲ ಭೈರವ ದೇವಸ್ಥಾನದಲ್ಲಿ ಸಂಭ್ರಮದಿಂದ ವಾರ್ಷಿಕ ಕಾರ್ಯಕ್ರಮಗಳು ನಡೆದಿವೆ. ಈ ಸಂದರ್ಭದಲ್ಲಿ ಭಕ್ತರು ಕಾಲ ಬೈರವನಿಗೆ ಮದ್ಯ, ಸಿಗರೇಟ್ ಸೇರಿದಂತೆ ಸುಮಾರು 1351 ವಿವಿಧ ಮಾದರಿಯ ಭೋಗದ ವಸ್ತುಗಳನ್ನು ಭೈರವನಿಗೆ ಭಕ್ತರು ಭಕ್ತಿಯಿಂದ ಅರ್ಪಿಸಿದ್ದಾರೆ.
ಉಜ್ಜೈನಿಯ ಕಾಲ ಭೈರವ ದೇವಾಲಯದಲ್ಲಿ ಮದ್ಯವನ್ನು ಅರ್ಪಿಸುವ ಸಂಪ್ರದಾಯವಿದೆ. ಪ್ರಾಚೀನ ಕಾಲದಿಂದಲೂ ಇಲ್ಲಿ ಭೈರವ ಅಷ್ಟಮಿಯನ್ನು ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ ಭಕ್ತರ ಸಮರ್ಪಿಸಿರುವಂತಹ ಮದ್ಯದ ವಸ್ತುಗಳನ್ನು ಬಳಸಿ ಭೈರವ್​ ಬಾಬಾನನ್ನು ಆಕರ್ಷಕವಾಗಿ ಅಲಂಕಾರ ಮಾಡಿದ್ದಾರೆ. ಪೂಜಾ ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಮದ್ಯದ ವಸ್ತುಗಳನ್ನು ಪ್ರಸಾದವಾಗಿ ಹಂಚಲಾಗಿದೆ.
ವರದಿಯ ಪ್ರಕಾರ 390 ಬಗೆಯ ಅಗರಬತ್ತಿಗಳು, 180 ವಿಧದ ಮುಖಗವಸುಗಳು, 75 ಬಗೆಯ ಒಣ ಹಣ್ಣುಗಳು, 64 ಬಗೆಯ ಚಾಕೊಲೇಟ್‌ಗಳು, 60 ಬಗೆಯ ಗುಜರಾತಿ ತಿನಿಸು, 60 ಬಗೆಯ ಸಿಗರೇಟ್‌ಗಳು, 56 ಬಗೆಯ ವಿವಿಧ ತಿಂಡಿಗಳು, 55 ಬಗೆಯ ಸಿಹಿತಿಂಡಿಗಳು, 45 ಬಗೆಯ ಬಿಸ್ಕೆಟ್‌ಗಳು, 40 ಬಗೆಯ ಮದ್ಯ (ರಮ್, ವಿಸ್ಕಿ, ಟಕಿಲಾ, ವೋಡ್ಕಾ ಬಿಯರ್ ಮತ್ತು ಶಾಂಪೇನ್), ಚಿಲ್ಲಮ್, ಗಾಂಜಾ, 40 ಬಗೆಯ ಬೇಕರಿ ವಸ್ತುಗಳು ಮತ್ತು 30 ಬಗೆಯ ಗಜಕ್, 28 ಬಗೆಯ ತಂಪು ಪಾನೀಯಗಳು ಮತ್ತು 28 ಬಗೆಯ ಹಣ್ಣುಗಳು ಭೋಗದ ವಸ್ತುಗಳಾಗಿ ಕಾಲ ಭೈರವನಿಗೆ ಅಲಂಕೃತವಾಗಿದ್ದವು.
ಭೈರವ ಅಷ್ಟಮಿಯ ದಿನದಂದು ಬಾಬಾ ಭೈರವನಾಥನನ್ನು ಪೂಜಿಸಿದರೆ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ.(ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two + eleven =
Remember me
