ನವದೆಹಲಿ:ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಇದೀಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಲಾಗಿದೆ.
ಇದನ್ನೂ ಓದಿ:ತನಗಿಂತ 30 ವರ್ಷ ಹಿರಿಯನ ಜತೆ ಓಡಿ ಹೋಗಿ ಮದ್ವೆಯಾದ ಯುವತಿ! ಪಾಲಕರು ಕರೆದಿದ್ದಕ್ಕೆ ಆಕೆ ಹೇಳಿದ್ದಿಷ್ಟು…
ಕೇಂದ್ರ ಏಜೆನ್ಸಿಯ ಕಚೇರಿಯಲ್ಲಿ ವ್ಯಾಪಕ ವಿಚಾರಣೆಯ ನಂತರ ಜಾರಿ ನಿರ್ದೇಶನಾಲಯ (ED) ಈ ಹಿಂದೆ ಗೋಯಲ್ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (PMLI) ಅಡಿಯಲ್ಲಿ ಸೆಪ್ಟೆಂಬರ್ 01 ರಂದು ಬಂಧಿಸಿತ್ತು.
ಗುರುವಾರ (ಸೆ.14) 74 ವರ್ಷದ ಉದ್ಯಮಿಯನ್ನು ಇಡಿ ರಿಮಾಂಡ್‌ನ ಕಡೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ತನಿಖಾ ಸಂಸ್ಥೆಯು ಹೆಚ್ಚಿನ ಬಂಧನವನ್ನು ಕೋರದ ಕಾರಣ, ನ್ಯಾಯಾಲಯವು ಗೋಯಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ:ಅಲ್ಲು ಅರ್ಜುನ್-ಅಟ್ಲೀ ಕಾಂಬೀನೇಷನ್​ನಲ್ಲಿ ಹೊಸ ಸಿನಿಮಾ?; ಸುಳಿವು ಕೊಟ್ಟ ‘ಪುಷ್ಪ 2’ ನಟ
ಜೆಟ್ ಏರ್‌ವೇಸ್, ನರೇಶ್ ಗೋಯಲ್ ಪತ್ನಿ ಅನಿತಾ ಮತ್ತು ಖಾಸಗಿ ಏರ್‌ಲೈನ್‌ನ ಕೆಲವು ಮಾಜಿ ಕಂಪನಿ ಕಾರ್ಯನಿರ್ವಾಹಕರ ವಿರುದ್ಧ ಸಿಬಿಐ ದಾಖಲಿಸಿದ ಎಫ್‌ಐಆರ್‌ನಲ್ಲಿ ಹಣ ವರ್ಗಾವಣೆ ಪ್ರಕರಣವು ಬೇರೂರಿದೆ. ಈ ಪ್ರಕರಣವು ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂ. ಮೊತ್ತದ ವಂಚನೆಗೆ ಸಂಬಂಧಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಜೆಟ್ ಏರ್‌ವೇಸ್ (ಇಂಡಿಯಾ) ಲಿಮಿಟೆಡ್‌ಗೆ ಒಟ್ಟು 848.86 ಕೋಟಿ ರೂ. ಸಾಲದ ಮಿತಿಗಳು ಮತ್ತು ಸಾಲಗಳನ್ನು ಅನುಮೋದಿಸಿದೆ ಎಂದು ಆರೋಪಿಸಿ ಬ್ಯಾಂಕ್‌ನಿಂದ ಬಂದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನೂ 538.62 ಕೋಟಿ ರೂ. ಬಾಕಿ ಉಳಿದಿದೆ,(ಏಜೆನ್ಸೀಸ್).
ಕೋಝಿಕ್ಕೋಡ್‌: ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ, ‘ಪರಿಸ್ಥಿತಿ 2018 ರಷ್ಟು ಭಯಾನಕವಾಗಿಲ್ಲ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 3 =
Remember me
