ಮೇರಠ್​:ದೆಹಲಿಯ ನಿಜಾಮುದ್ದೀನ್​ನಲ್ಲಿ ಆಯೋಜನೆಗೊಂಡಿದ್ದ ತಬ್ಲಿಗಿ ಜಮಾತ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಂತರ ಕಾಣೆಯಾಗಿ ಮೌಲಾನಾ ಅವರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ 14 ಮಂದಿ ಧಾರ್ಮಿಕ ಬೋಧಕರನ್ನು ಪೊಲೀಸರು ಬಂಧಿಸಿದ್ದಾರೆ.
ನಿಷೇಧಾಜ್ಞೆಯ ಹೊರತಾಗಿಯೂ ದೆಹಲಿಯ ನಿಜಾಮುದ್ದೀನ್​ ಧಾರ್ಮಿಕ ಕೇಂದ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೇಪಾಳ, ಬಿಹಾರ, ದೆಹಲಿ ಮತ್ತು ಮಹಾರಾಷ್ಟ್ರದ ಇವರೆಲ್ಲರೂ ಪಾಲ್ಗೊಂಡಿದ್ದರು. ಕರೊನಾ ವೈರಸ್​ ಸೋಂಕು ಹರಡಿದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಅಲ್ಲಿಂದ ತಪ್ಪಿಸಿಕೊಂಡು ಮೇರಠ್​ಗೆ ಬಂದ ಇವರೆಲ್ಲರೂ ಮೌಲಾನಾ ಅವರ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದರು ಎನ್ನಲಾಗಿದೆ.
ಸದ್ಯ ಇವರೆಲ್ಲರೂ ಅದೇ ಮನೆಯಲ್ಲಿ 14 ದಿನ ಕ್ವಾರಂಟೇನ್​ನಲ್ಲಿ ಇರಿಸಲಾಗುತ್ತಿದೆ. ಇವರೆಲ್ಲರಿಗೂ ಆಶ್ರಯ ನೀಡಿದ ಆರೋಪದಲ್ಲಿ ಮೌಲಾನಾ ವಿರುದ್ಧ ದೂರು ದಾಖಲಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ನಿಜಾಮುದ್ದೀನ್​ ಪ್ರಾರ್ಥನಾ ಮಂದಿರದಿಂದ ಬಿಜ್ನೋರ್​ ಮಸೀದಿಗೆ ಹೋಗಿ ಅಡಗಿದ್ದ 8 ವಿದೇಶಿಗರ ಪತ್ತೆ; ಮೌಲ್ವಿ ಸೇರಿ ಐವರ ವಿರುದ್ಧ ಕೇಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + one =
Remember me
