ಬೆಂಗಳೂರು: ನಿಲ್ಲಿಸಿದ್ದ ಬಿಎಂಡಬ್ಲ್ಯು ಕಾರಿನಿಂದ ಹಾಡಹಗಲೇ ಇಬ್ಬರು ಖದೀಮರು ಸುಮಾರು 14 ಲಕ್ಷ ರೂ. ಅಪಹರಿಸಿದ್ದು, ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಕಳ್ಳರ ಕೈಚಳಕಕ್ಕೆ ಜನ ಬೆಸ್ತುಬಿದ್ದಿದ್ದಾರೆ.
ಇದನ್ನೂ ಓದಿ:ವರ್ತೂರು ಸಂತೋಷ್ ಬಳಿ ಇರೋದು ಒರಿಜಿನಲ್ ಹುಲಿ ಉಗುರು!; ಆರೋಪ ಸಾಬೀತಾದರೆ ಎಷ್ಟು ವರ್ಷ ಶಿಕ್ಷೆ?ಕಳ್ಳತನದ ದೃಶ್ಯ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐಟಿ ಪ್ರಕಾರ ಕಾರು ಬೆಂಗಳೂರಿನ ಆನೇಕಲ್ ತಾಲೂಕಿನ ನಿವಾಸಿ ಬಾಬು ಎಂಬುವವರಿಗೆ ಸೇರಿದ್ದಾಗಿದೆ.ವ್ಯಕ್ತಿಯೊಬ್ಬ ಚಾಲಕನ ಪಕ್ಕದ ಕಿಟಕಿಯನ್ನು ಒಡೆದು ಕಾರಿನೊಳಗೆ ನುಗ್ಗಿ ನಗದನ್ನು ತೆಗೆದುಕೊಂಡು ತನ್ನ ಸಹ ಸಹಚರನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಸಿಸಿ ಟಿವಿ ಫೂಟೇಜ್ ನಲ್ಲಿ ಒಬ್ಬ ಮುಸುಕುಧಾರಿ ನಡೆದು ಬಂದರೆ, ಮತ್ತೊಬ್ಬ ಬೈಕ್​ನಲ್ಲಿ ಬರುತ್ತಾನೆ. ಒಬ್ಬ ಸುತ್ತಲೂ ನೋಡುತ್ತಾನೆ, ನಂತರ ಕಾರಿನೊಳಗೆ ಇಣುಕಿ ನೋಡುತ್ತಾನೆ, ಆಗ ಆ ವ್ಯಕ್ತಿ ಸದ್ದಿಲ್ಲದೆ ಡ್ರೈವರ್ ಸೀಟಿನ ಕಿಟಕಿಯ ಗಾಜನ್ನು ಒಡೆದು ಒಳಗೆ ನುಗ್ಗುತ್ತಾನೆ. ಬಳಿಕ ಹಣದ ಚೀಲ ತೆಗೆದುಕೊಳ್ಳುತ್ತಾನೆ, ನಂತರ ಅವನು ಬೈಕ್​ ನಲ್ಲಿದ್ದವನತ್ತ ದೃಷ್ಟಿ ಹಾಯಿಸುತ್ತಾನೆ. ಆತ ಸನ್ನೆ ಮಾಡಿದಾಗ ಕೈಯಲ್ಲಿ ಚೀಲದೊಂದಿಗೆ ಬೈಕ್​ ಬಳಿ ಬಂದು ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುತ್ತಾನೆ. ಸ್ಥಳದಿಂದ ಇಬ್ಬರೂ ಪರಾರಿಯಾಗುತ್ತಾರೆ.
ಕಾರು ನಿಲ್ಲಿಸಿದ್ದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಳುವಾದ ಹಣದ ನಿಖರವಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ತನಿಖೆಯಿಂದಷ್ಟೇ ಎಷ್ಟೆಂದು ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಪ್ರಭಾಸ್ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − two =
Remember me
