ಮುಜಫ್ಫರ್​ನಗರ:ವಲಸೆ ಕಾರ್ಮಿಕರ ದಾರುಣ ಸಾವು ಮುಂದುವರಿದಿದೆ. ಒಂದೆಡೆ, ಮುಜಫ್ಪರ್​ನಗರದ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾಮಿರ್ಕರ ಮೇಲೆ ಬಸ್​ ಹರಿದು 6 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ಮಧ್ಯಪ್ರದೇಶದ ಗುನಾದಲ್ಲಿ ಟ್ರಕ್ಕೊಂದು ಬಸ್​ಗೆ ಡಿಕ್ಕಿಯಾಗಿದ್ದರಿಂದ 8 ಜನ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಮುಜಫ್ಫರ್​ನಗರ- ಸಹರಣ್​ಪುರ ಹೆದ್ದಾರಿಯಲ್ಲಿ ವಲಸೆ ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮೂರುಗಳಿಗೆ ಸಾಗುತ್ತಿದ್ದರು. ಗಲೌಲಿ ಚೆಕ್​ಪೋಸ್ಟ್​ ಬಳಿ ಉತ್ತರಪ್ರದೇಶದ ಸಾರಿಗೆ ಸಮಸ್ತೆ ಬಸ್​ ಅವರ ಮೇಲೆ ಹರಿದಿದೆ. ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, ನಾಲ್ವರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ;ಇದೇನು ವಿಚಿತ್ರ…! ವಿಷಾನಿಲ ದುರಂತಕ್ಕೆ ಯಾರೂ ಕಾರಣರಲ್ಲವಂತೆ..!
ದೂರದ ಮುಂಬೈನಿಂದ ಟ್ರಕ್​ನಲ್ಲಿ ಉತ್ತರಪ್ರದೇಶದ ತಮ್ಮೂರುಗಳಿಗೆ ಹೊರಟಿದ್ದರು. ಬುಧವಾರ ರಾತ್ರಿ ಮಧ್ಯಪ್ರದೇಶದ ಗುನಾ ಬಳಿ ಬಸ್​ವೊಂದಕ್ಕೆ ಟ್ರಕ್​ ಡಿಕ್ಕಿಯಾಗಿದೆ. ಪರಿಣಾಮ 8 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ವಲಸೆ ಕಾರ್ಮಿಕರಿಗಾಗಿ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳನ್ನು ಬಿಡಲಾಗುತ್ತಿದೆಯಾದರೂ, ಸಾವಿರಾರು ಸಂಖ್ಯೆಯಲ್ಲಿ ಜನರು ರೈಲು ನಿಲ್ದಾಣಗಳ ಎದುರು ಬೀಡು ಬಿಟ್ಟಿದ್ದಾರೆ. ಸೀಮಿತ ಸಂಖ್ಯೆಯಲ್ಲಿರುವ ರೈಲುಗಳಲ್ಲಿ ಸಾಗಲು ದಿನಗಟ್ಟಲೇ ಕಾಯಬೇಕಿದೆ. ಹೀಗಾಗಿ ಜನರು ಕಾಲ್ನಡಿಗೆ ಹಾಗೂ ಟ್ರಕ್​, ಲಾರಿ ಹಾಗೂ ಇತರ ವಾಹನಗಳಲ್ಲಿ ಪ್ರಯಾಣಕ್ಕೆ ಮುಂದಾಗುತ್ತಿದ್ದಾರೆ.
ನಂಜನಗೂಡಿನಲ್ಲಿ ತಯಾರಾಗಲಿದೆ ಕರೊನಾಗೆ ಔಷಧ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
