ಗೌಹಾಟಿ:ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ಈ ಸಮಯದಲ್ಲಿ ಎಲ್ಲೆಲ್ಲೂ ಆ ಬಗ್ಗೆಯೇ ಸುದ್ದಿಗಳು ಹೊರಬೀಳುತ್ತಿವೆ, ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ತಾಲಿಬಾನ್​​ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪೋಸ್ಟ್​ ಹಾಕುವಾಗ, ಶೇರ್​ ಅಥವಾ ಲೈಕ್​ ಮಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಹೇಳಿದ್ದಾರೆ.
ತಾಲಿಬಾನ್​ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್​ಗಳ ವಿಚಾರವಾಗಿ, ಅಸ್ಸಾಂ ಪೊಲೀಸರು ಈವರೆಗೆ 14 ಜನರನ್ನು ಬಂಧಿಸಿದ್ದಾರೆ. ಈ ಬಗ್ಗೆ ತಿಳಿಸಿರುವ ರಾಜ್ಯದ ಸ್ಪೆಷಲ್ ಡಿಜಿಪಿ ಜಿ.ಪಿ.ಸಿಂಗ್​ ಅವರು, ಬಂಧಿತರು ದೇಶದ ವಿವಿಧ ಕಾನೂನುಗಳ ಉಲ್ಲಂಘನೆಯಾಗುವ ರೀತಿಯಲ್ಲಿ ಪೋಸ್ಟ್​ಗಳನ್ನು ಮಾಡಿದ್ದರು. ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಮಾಧ್ಯಮದಲ್ಲಿ ಈ​​ ಬಗ್ಗೆ ಪೋಸ್ಟ್​ ಅಥವಾ ಲೈಕ್​ ಮಾಡುವ ಸಂದರ್ಭದಲ್ಲಿ ವಿವೇಚನೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಕಾನೂನು: ಮೊದಲ ಹೆಜ್ಜೆ ಇಡುತ್ತಿದೆ ಈ ರಾಜ್ಯ!
ಕಳೆದ ದಿನಗಳಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಖುರ್​ ರೆಹಮಾನ್​ ಬರ್ಖ್​ ಅವರು, ತಾಲಿಬಾನ್​​ಅನ್ನು ಸ್ವಾತಂತ್ರ್ಯ ಹೋರಾಟಗಾರರೆಂಬಂತೆ ಬಿಂಬಿಸಿದ್ದ ಹಿನ್ನೆಲೆಯಲ್ಲಿ, ಪೊಲೀಸರು ‘ದೇಶದ್ರೋಹ’ ಪ್ರಕರಣ ದಾಖಲಿಸಿದ್ದರು. ಫೇಸ್​ಬುಕ್​ನಲ್ಲಿ ತಾಲಿಬಾನ್​ ಪರ ಹೇಳಿಕೆ ನೀಡಿದ್ದ ಇತರ ಇಬ್ಬರ ವಿರುದ್ಧ ಕೂಡ ಕೇಸು ದಾಖಲಿಸಲಾಗಿತ್ತು.(ಏಜೆನ್ಸೀಸ್)
ತಾಯ್ನಾಡಿಗೆ ಹೊರಟ ಭಾರತೀಯರನ್ನು ವಿಚಾರಣೆಗೆ ಕರೆದೊಯ್ದ ತಾಲಿಬಾನ್​!

ವರ್ಲ್ಡ್​​ ಅಥ್ಲೆಟಿಕ್ಸ್​​ನಲ್ಲಿ ಭಾರತಕ್ಕೆ ಎರಡನೇ ಪದಕ: ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಅಮಿತ್​​ ಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 8 =
Remember me
