ತಿರುವನಂತಪುರಂ:ನಿಫಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಲಪ್ಪುರಂನ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿರುವುದಾಗಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. 10 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಶುಕ್ರವಾರದಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ:ಕಾಂಟ್ಯಾಕ್ಟ್​​ ಲೆನ್ಸ್​ನಿಂದ ಕಾರ್ನಿಯಾಗೆ ಡ್ಯಾಮೇಜ್​​; ಕಣ್ಣಿನ ಸ್ಥಿತಿ ಬಗ್ಗೆ ನಟಿ ಹೇಳಿಕೊಂಡಿದ್ದು ಹೀಗೆ…
ವೆಂಟಿಲೇಟರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು(ಜುಲೈ 21) ಬೆಳಗ್ಗೆ ಮೂತ್ರದ ಉತ್ಪಾದನೆಯೂ ಕಡಿಮೆಯಾಗಿದೆ. ಬಳಿಕ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಅವರನ್ನು ಉಳಿಸಲು ಮಾಡಿದ ನಮ್ಮ ಪ್ರಯತ್ನಗಳು ವಿಫಲವಾಗಿವೆ. ಆರೋಗ್ಯ ಹದಗೆಟ್ಟು ಬೆಳಗ್ಗೆ 11:30ಕ್ಕೆ ಬಾಲಕ ಮೃತಪಟ್ಟಿದ್ದಾರೆ ಎಂದು ಸಚಿವೆ ವೀಣಾ ಜಾರ್ಜ್​​ ಖಚಿತಪಡಿಸಿದ್ದಾರೆ.
ಬಾಲಕನ ಅಂತ್ಯಕ್ರಿಯೆಯನ್ನು ಅಂತಾರಾಷ್ಟ್ರೀಯ ಪ್ರೋಟೋಕಾಲ್‌ಗಳ ಪ್ರಕಾರ ನಡೆಸಲಾಗುವುದು. ಜಿಲ್ಲಾಧಿಕಾರಿಗಳು ಬಾಲಕನ ಪಾಲಕರು ಮತ್ತು ಕುಟುಂಬದೊಂದಿಗೆ ಸಮಾಲೋಚಿಸಿದ ನಂತರ ಅಂತ್ಯಕ್ರಿಯೆಯ ಬಗ್ಗೆ ನಿರ್ಧಾರಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಬಾಲಕನಿಗೆ ಶನಿವಾರ ನಿಫಾ ವೈರಸ್‌ ಲಕ್ಷಣಗಳು ಕಂಡುಬಂದಿವೆ. ಪುಣೆ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಸೋಂಕನ್ನು ದೃಢಪಡಿಸಿದೆ. ರಾಜ್ಯದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಬಾಲಕನ ಮಾದರಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಅವರು ಹೇಳಿದರು. ಇನ್ನೂ ನಾಲ್ವರಿಗೆ ನಿಫಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರಲ್ಲಿ ಒಬ್ಬರಿಗೆ ಲೈಫ್ ಸಪೋರ್ಟ್ ಹಾಕಲಾಗಿದೆ. ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಬಾಲಕನ ಸಂಪರ್ಕಕ್ಕೆ ಬಂದ ಸುಮಾರು 240 ಜನರ ಮೇಲೆ ನಿಗಾ ಇರಿಸಲಾಗಿದೆ ಎಂದು ಸಚಿವೆ ಹೇಳಿದ್ದಾರೆ.
ಮಲಪ್ಪುರಂನಲ್ಲಿ ಆರೋಗ್ಯ ಇಲಾಖೆ ಕಂಟ್ರೋಲ್ ರೂಂ ತೆರೆದಿದ್ದು, ಅಲರ್ಟ್ ಘೋಷಿಸಲಾಗಿದೆ. ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ ನಿಫಾ ವೈರಸ್‌ನ ಕೇಂದ್ರಬಿಂದುವಾಗಿದೆ. ಜನರಿಗೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದ್ದು, ಪಾಂಡಿಕ್ಕಾಡ್ ಪಂಚಾಯತ್ ವ್ಯಾಪ್ತಿಯ ಆಯ್ದ ಪ್ರದೇಶಗಳಲ್ಲಿ ಲಾಕ್​​ಡೌನ್ ಘೋಷಿಸಲಾಗಿದೆ. ನಿಫಾ ವೈರಸ್ (NiV) ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗ. ಇದನ್ನು ಝೂನೋಟಿಕ್ ಕಾಯಿಲೆ ಎಂದು ಕರೆಯಲಾಗುತ್ತದೆ. ಇದು ಬಾವಲಿ ಮತ್ತು ಹಂದಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ವೈರಸ್ ಜ್ವರ, ವಾಂತಿ, ಉಸಿರಾಟದ ಕಾಯಿಲೆ ಮತ್ತು ಮೆದುಳಿನಲ್ಲಿ ಊತವನ್ನು ಉಂಟುಮಾಡಬಹುದು. (ಏಜೆನ್ಸೀಸ್​​)
ಬಾಂಗ್ಲಾದಲ್ಲಿ ಹಿಂಸಾತ್ಮಕ ಪ್ರತಿಭಟನೆ; ಶೂಟ್​​ ಆನ್​​ ಸೈಟ್​​ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + seventeen =
Remember me
