ಮುಂಬೈ:ಮನಕಲುಕುವ ಘಟನೆಯೊಂದರಲ್ಲಿ ತಾಯಿ ಮೃತಪಟ್ಟಿರುವ ವಿಷಯ ತಿಳಿಯದೆ ಆಕೆಯ ಶವದೊಂದಿಗೆ ಬುದ್ದಿಮಾಂದ್ಯ ಮಗನೋರ್ವ ನಾಲ್ಕು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಕಲ್ಯಾಣ್​ ಪ್ರದೇಶದಲ್ಲಿ ನಡೆದಿದೆ. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ನೆರೆಹೊರೆಯವರು ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
ಮೃತರನ್ನು ಸಿಲ್ವಿಯಾ ಡೇನಿಯಲ್ (44) ಎಂದು ಗುರುತಿಸಲಾಗಿದ್ದು, ಥಾಣೆಯ ಕಲ್ಯಾಣ್​ ಪ್ರದೇಶದ ಫ್ಲ್ಯಾಟ್​​ ಒಂದರಲ್ಲಿ ತಮ್ಮ ಬುದ್ದಿಮಾಂದ್ಯ ಮಗನೊಂದಿಗೆ ವಾಸಿಸುತ್ತಿದ್ದರು. ಪತಿ ಉದ್ಯೋಗ ನಿಮಿತ್ತ ಪುಣೆಯಲ್ಲಿ ನೆಲೆಸಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ:ಆಶ್ರಯತಾಣದಲ್ಲಿದ್ದ 13 ಮಕ್ಕಳು ನಿಗೂಢ ಸಾವು; ಮ್ಯಾಜಿಸ್ಟ್ರೇಟ್​ ತನಿಖೆಗೆ ಆದೇಶಿಸಿದ ಸರ್ಕಾರ
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿಯೊಬ್ಬರು, ಕೆಲವು ತಿಂಗಳಿನಿಂದ ಸಿಲ್ವಿಯಾ ಡೇನಿಯಲ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜುಲೈ 28ರಂದು ಅವರು ನಿಧನರಾಗಿದ್ದು, ತನ್ನ ತಾಯಿ ಮರತಪಟ್ಟ ವಿಚಾರ ತಿಳಿಯದೆ ಅವರ ಮಗ ನಾಲ್ಕು ದಿನಗಳ ಕಾಲ ಶವದೊಂದಿಗೆ ಕಾಲ ಕಳೆದಿದ್ದಾನೆ. ದಿನ ಕಳೆದಂತೆ ಮನೆಯಿಂದ ದುರ್ವಾಸನೆ ಬರಲು ಆರಂಭಿಸಿದ್ದು, ಬಾಗಿಲು ಬಡಿದಾಗ ಅವರ ಮಗ ಡೋರ್​ ತೆರೆದಿದ್ದಾನೆ. ಆಗ ಮಹಿಳೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮಹಿಳೆಯ ಪತಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮನೆಯಲ್ಲಿ ಕೆಲಕಾಲ ಪರಿಶೀಲನೆ ನಡೆಸಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − six =
Remember me
