ನವದೆಹಲಿ:ಕರೊನಾ ಸೋಂಕಿಗೆ ಒಳಗಾಗಿ ದೆಹಲಿಯ ಚತ್ತರ್​ಪುರದ ಸರ್ದಾರ್​ ಪಟೇಲ್​ ಕೊವಿಡ್​-19 ಕೇರ್​ ಸೆಂಟರ್​​ನಲ್ಲಿ ದಾಖಲಾಗಿದ್ದ 14 ವರ್ಷದ ಬಾಲಕಿಗೆ ಇನ್ನೋರ್ವ ಕರೊನಾ ರೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಜು.15ರಂದು ಬಾಲಕಿ ವಾಶ್​ರೂಂಗೆ ಹೋಗಿದ್ದಾಗ, ಈ ವ್ಯಕ್ತಿ ಅಲ್ಲಿಯೇ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಪ್ರಕರಣ ಇಂದು ಬೆಳಕಿಗೆ ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ:ಕರೊನಾ ವಿರುದ್ಧ ‘ಚಹಾ’ ಹೋರಾಟ; ಏರ್​ಪೋರ್ಟ್​ ಅಧಿಕಾರಿಗಳ ಹೊಸ ಪ್ರಯೋಗ
ಆರೋಪಿ 19 ವರ್ಷದ ಯುವಕನನ್ನು ಮತ್ತು ಅವನೊಂದಿಗೆ ಇದ್ದ ಇನ್ನೊಬ್ಬನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.ಈ ಬಾಲಕಿ ಮತ್ತು ಯುವಕ ಇಬ್ಬರೂ ಸ್ಲಂ ನಿವಾಸಿಗಳು. ಇವರು ಕೊವಿಡ್​-19ಗೆ ಒಳಗಾಗಿ ಇಲ್ಲಿ ದಾಖಲಾಗಿದ್ದರು. ಇವರಿಬ್ಬರ ಸಂಬಂಧಿಕರೂ ಇದ್ದಾರೆ. ಅಂದು ವಾಶ್​ರೂಂನಲ್ಲಿ ಆದ ಘಟನೆಯನ್ನು ಬಾಲಕಿ ತನ್ನ ಸಂಬಂಧಿಯೋರ್ವರಿಗೆ ಹೇಳಿಕೊಂಡಿದ್ದಳು. ಅವರೇ ನಮಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.
ಯುವಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೆ, ಆತನ ಸಹಚರ ಅದನ್ನು ಮೊಬೈಲ್​​ನಲ್ಲಿ ಸೆರೆ ಹಿಡಿಯುತ್ತಿದ್ದ. ಆಕೆ ನೀಡಿದ ದೂರಿನ ಅನ್ವಯ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಫೋನ್​ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.10,000 ಬೆಡ್​ಗಳುಳ್ಳ ಸರ್ದಾರ್​ ಪಟೇಲ್​ ಕೊವಿಡ್​ ಸೆಂಟರ್​​ನ್ನು ಈ ತಿಂಗಳ ಪ್ರಾರಂಭದಲ್ಲಿ ದೆಹಲಿಯ ಲೆಫ್ಟಿನಂಟ್​ ಗವರ್ನರ್​ ಅನಿಲ್​ ಬೈಜಾಲ್​ ಅವರು ಉದ್ಘಾಟಿಸಿದ್ದರು.(ಏಜೆನ್ಸೀಸ್​)
ಕೊವಿಡ್​-19 ರೋಗಿಗಳಿಗೆ ಇನ್ಮುಂದೆ ಚಿಕಿತ್ಸೆ ನೀಡುವುದಿಲ್ಲ ಎಂದ 42 ಖಾಸಗಿ ಆಸ್ಪತ್ರೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
