ಜಾರ್ಖಂಡ್‌:ಗಂಡ ಹೆಂಡತಿಯ ನಡುವಿನ ಜಗಳವು ದುರಂತವೊಂದಕ್ಕೆ ಕಾರಣವಾಗಿರುವ ಘಟನೆ ಜಾರ್ಖಂಡ್‌ನ ಧಾತುವಾ ಗ್ರಾಮದಲ್ಲಿ ನಡೆದಿದೆ.
ಸುಪ್ರಿಯಾ(14) ಸಾವಿಗೀಡಾದ ದುರ್ದೈವಿಯಾಗಿದ್ದು, ಉದಯನಾಥ್​ ಹಾಗೂ ಕಾಂತಿದೇವಿ ಜಗಳವಾಡಿದ ದಂಪತಿಗಳಾಗಿದ್ದಾರೆ.
ಇದನ್ನೂ ಓದಿ:ಸೇಂಟ್ ಜೋಸೆಫ್ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ನಾಳೆ
ಬುಧವಾರ ಬೆಳಿಗ್ಗೆ ಗಣೇಶಿನಾಥ ಎಂಬಾತ ದಂಪತಿಗಳ ಮನೆಯ ಹತ್ತಿರ ಬಂದು ಸಾಲವಾಗಿ ಪಡೆದ 100ರೂ.ವನ್ನು ಹಿಂದಿರುಗಿಸುವಂತೆ ಉದಯನಾಥ್​ಗೆ ಕೇಳಿಕೊಂಡಿದ್ದಾನೆ. ಈ ವೇಳೆ ಉದಯ ತನ್ನ ಬಳಿ ಹಣವಿಲ್ಲವೆಂದು ಎಂದು ಹೇಳಿ, ತನ್ನ ಹೆಂಡತಿಗೆ 100 ರೂ.ನೀಡುವಂತೆ ಮನವಿ ಮಾಡಿದ್ದಾನೆ.
ಆದರೆ ಕಾಂತಿದೇವಿ ಈ ವೇಳೆ ಹಣ ನೀಡಲು ನಿರಾಕರಿಸಿದ್ದು, ಮನೆಯಂಗಳದಲ್ಲಿಯೇ ದಂಪತಿ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಸಿಟ್ಟಿಗೆದ್ದ ಉದಯನಾಥ್ ಮನೆಯಲ್ಲಿದ್ದ ಬಂದೂಕನ್ನು ಹೊರತೆಗೆದಿದ್ದು, ಈ ವೇಳೆ ಆಕಸ್ಮಾತ್ ಆಗಿ ಗುಂಡು ಸೋದರ​ ಸೊಸೆ ಸುಪ್ರಿಯಾಗೆ ತಗುಲಿದೆ.
ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇನ್ನು, ವಿಷಯವನ್ನು ತಿಳಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
