ಅನಂತ್‌ನಾಗ್:14 ವರ್ಷದ ಬಾಲಕಿಯೋರ್ವಳು ನೆರೆಮನೆಯ ವ್ಯಕ್ತಿಯಿಂದ ನಿರಂತರ ಅತ್ಯಾಚಾರಕ್ಕೊಳಗಾಗಿ ಈಗ ಎಂಟು ತಿಂಗಳ ಗರ್ಭಿಣಿಯಾಗಿರುವ ಆತಂಕಕಾರಿ ಘಟನೆ  ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನ ಉತ್ತರ್‌ಸೂ ಪ್ರದೇಶದಲ್ಲಿ ನಡೆದಿದೆ.ಅತ್ಯಾಚಾರವೆಸಗಿದ ಆರೋಪಿ 35 ವರ್ಷದ ವ್ಯಕ್ತಿಯನ್ನು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ವೆಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬ ಸದಸ್ಯರ ಪ್ರಕಾರ, ಬಾಲಕಿ ಕೆಲವು ದಿನಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಆಕೆಯ ತಂದೆ ಮೊದಲು ಅವಳನ್ನು ಸ್ಥಳೀಯ ಆಧ್ಯಾತ್ಮಿಕ ಚಿಕಿತ್ಸಕರ ಬಳಿ ಕರೆದೊಯ್ದರು. ಆದರೆ ಆಕೆಯ ಸ್ಥಿತಿ ಹದಗೆಡುತ್ತ ಬಂದಾಗ, ನಂತರ ಆಕೆಯನ್ನು ಅನಂತ್‌ನಾಗ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯನ್ನು ಪರೀಕ್ಷಿಸಿದಾಗ ಅವಳು ಎಂಟು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕರೊನಾ ಸಮಯದಲ್ಲಿ ಮುದ ನೀಡುವ ನಾವಿಕ ಕಾರ್ಯಕ್ರಮಗಳು
ನಂತರ ಎಚ್ಚೆತ್ತುಕೊಂಡ ಕುಟುಂಬದ ಸದಸ್ಯರು ಸ್ಥಳೀಯ ನಾಗರಿಕ ಸಮಾಜದ ಸದಸ್ಯರ ಸಹಾಯದಿಂದ ಅನಂತ್‌ನಾಗ್‌ನ ಶಾಂಗಾಸ್ ಪ್ರದೇಶದ ಉತ್ತರ್‌ಸೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಈ ಕುರಿತು ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.ಆರೋಪಿ ಸಂತ್ರಸ್ತ ಬಾಲಕಿಯ ಮನೆಯ ಸಮೀಪದಲ್ಲೇ ವಾಸಿಸುತ್ತಿದ್ದ, ಆಕೆಯ ತಾಯಿಯ ಸಂಬಂಧಿಯೂ ಆಗಿದ್ದಾನೆ, ಏನಾದರೊಂದು ನೆಪ ಇಟ್ಟುಕೊಂಡು ತಮ್ಮ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಈ ಅವಧಿಯಲ್ಲಿ, ಆರೋಪಿ ಬಾಲಕಿಗೆ ಆಮಿಷವೊಡ್ಡಿ ಕಳೆದ ತಿಂಗಳುಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದ.
ಇದನ್ನೂ ಓದಿ:LIVE: ಕರೊನಾ ವಿರುದ್ಧದ ಹೋರಾಟದಲ್ಲಿ ಜನರ ಒಗ್ಗಟ್ಟಿಗೆ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಶ್ಲಾಘನೆ
ಸಂತ್ರಸ್ತ ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಆ ವ್ಯಕ್ತಿಯು ತನಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರವೆಸಗಿದ್ದಾನೆಂದು ಮತ್ತು ಅವಳು ಈ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಬಾರದೆಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾಳೆ. ಘಟನೆ ಆ ಪ್ರದೇಶದಲ್ಲಿ ಆಘಾತವನ್ನುಂಟುಮಾಡಿದೆ ಮತ್ತು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಲ್ಲಿಯ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.
ಕೆಲವೊಮ್ಮೆ ಚಿಕ್ಕ ಸಂಗತಿಗಳೂ ಅಮೂಲ್ಯವೆನಿಸುತ್ತವೆ. ಅದಕ್ಕೊಂದು ಸಾಕ್ಷಿ ಈ ವಿಡಿಯೋದಲ್ಲಿದೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 − two =
Remember me
