ಅಯೋಧ್ಯೆ:ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಾಲ್ಕು ದಿನ ನಡೆಯಲಿರುವ ಬೆಳಕಿನ ಹಬ್ಬ ಕಳೆ ಕಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೀಪ ಬೆಳಗುವ ಮೂಲಕ 6ನೇ ಆವೃತ್ತಿಯ ದೀಪೋತ್ಸವಕ್ಕೆ ಚಾಲನೆ ನೀಡಿದರು. ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ತಾತ್ಕಾಲಿಕ ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದ ಮೋದಿ, ನಂತರ ರಾಮಮಂದಿರ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು. ತದನಂತರ ಸಾಂಪ್ರದಾಯಿಕವಾಗಿ ನಡೆಯುವ ಶ್ರೀರಾಮನ ಪಟ್ಟಾಭಿಷೇಕದ ಸಾಂಕೇತಿಕ ಆಚರಣೆ ನೆರವೇರಿಸಿದರು.
ಮೊದಲ ದೀಪ ಬೆಳಗಿದ ಮೋದಿ:ಸರಯೂ ನದಿ ತೀರದ ರಾಮ್ ಕಿ ಪೈಡಿ ಘಾಟ್​ನಲ್ಲಿ ನಡೆದ ಆರತಿ ಕಾರ್ಯಕ್ರಮದಲ್ಲಿ ಮೊದಲ ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಪ್ರಧಾನಿ ಚಾಲನೆ ನೀಡಿದರು. ನಂತರ ದಂಡೆಯ ಇಕ್ಕೆಲದಲ್ಲಿ ಜೋಡಿಸಲಾದ ಹಣತೆಗಳನ್ನು ಸ್ವಯಂ ಸೇವಕರು ಹಚ್ಚಿದರು. ನಂತರ ಮ್ಯೂಸಿಕಲ್ ಷೋ ಮತ್ತು 3ಡಿ ಲೇಸರ್ ಲೈಟ್ ಮೂಲಕ ರಾಮಾಯಣ ಪ್ರಸ್ತುತಪಡಿಸಲಾಯಿತು. ಈ ಸಂಭ್ರಮಕ್ಕೆ ರಷ್ಯಾ, ಮಾಲ್ದೀವ್ಸ್, ಶ್ರೀಲಂಕಾದ ಪ್ರತಿನಿಧಿಗಳ ಜತೆ ಪ್ರಧಾನಿ ಮೋದಿ ಸಾಕ್ಷಿಯಾದರು.
ಗಿನ್ನಿಸ್ ರೆಕಾರ್ಡ್:ಸರಯೂ ನದಿ ತೀರದ 40 ಘಾಟ್​ಗಳು 15.76 ಲಕ್ಷ ಮಣ್ಣಿನ ದೀಪಗಳಿಂದ ಮಿಂದೆದ್ದಿದ್ದು, ಗಿನ್ನಿಸ್ ದಾಖಲೆ ಬರೆದಿದೆ. 2021ರ ದೀಪೋತ್ಸವದಲ್ಲಿ 9,41,551 ದೀಪ ಬೆಳಗಿಸುವ ಮೂಲಕ ಅಯೋಧ್ಯೆ ಆಡಳಿತ ವಿಶ್ವ ದಾಖಲೆ ಬರೆದಿತ್ತು. ಆದರೆ, ಉಜ್ಜಯಿನಿಯಲ್ಲಿ ಕಳೆದ ಮಹಾ ಶಿವರಾತ್ರಿಯಂದು 11,71,078 ದೀಪಗಳನ್ನು ಬೆಳಗಿಸಿ ಈ ದಾಖಲೆ ಮುರಿಯಲಾಗಿತ್ತು. ಇದೀಗ 15.76 ಲಕ್ಷ ಮಣ್ಣಿನ ದೀಪ ಬೆಳಗಿಸುವ ಮೂಲಕ ಮತ್ತೆ ದಾಖಲೆ ಮಾಡಿದೆ. ಯೋಗಿ ಆಡಳಿತ ಒಟ್ಟು 18 ಲಕ್ಷ ಮಣ್ಣಿನ ದೀಪ ಬೆಳಗಿಸುವ ಗುರಿ ಹೊಂದಿತ್ತು. ದೀಪೋತ್ಸವದ ಲೋಗೋ ಮತ್ತು ಕ್ಯಾಪ್ ಹೊಂದಿರುವ ಬಿಳಿ ಟೀ ಶರ್ಟ್ ಧರಿಸಿದ್ದ 22 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಮಣ್ಣಿನ ದೀಪಗಳನ್ನು ಬೆಳಗಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು. ಸ್ವಯಂ ಸೇವಕರು ಪಾಳಿಯಲ್ಲಿ ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.
ಸಬ್ ಕಾ ಸಾತ್ ಸಬ್ ಕಾ ವಿಕಾಸ್ ರಾಮನಿಂದ ಪ್ರೇರಿತ:ಶ್ರೀರಾಮನ ಆಳ್ವಿಕೆಯಲ್ಲೇ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಇತ್ತು. ಇದು ನಮ್ಮ ಸರ್ಕಾರಕ್ಕೆ ಧ್ಯೇಯವಾಕ್ಯದ ಸ್ಪೂರ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಮಕಥಾ ಪಾರ್ಕ್​ನಲ್ಲಿ ಭಾಷಣ ಮಾಡಿದ ಅವರು, ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಹಾತೊರೆಯುವ ಜನರಿಗೆ ಭಗವಾನ್ ಶ್ರೀರಾಮನ ಆದರ್ಶಗಳು ಬೆಳಕಿನ ದಾರಿಯಾಗಿದೆ ಮತ್ತು ಅತ್ಯಂತ ಕಷ್ಟಕರವಾದ ಗುರಿಗಳನ್ನು ಸಾಧಿಸಲು ಧೈರ್ಯ ನೀಡುತ್ತವೆ ಎಂದರು. ಅಯೋಧ್ಯೆಯಲ್ಲಿನ ದೀಪೋತ್ಸವಕ್ಕೆ ಇಡೀ ಉತ್ತರ ಪ್ರದೇಶ ಹಾಗೂ ಪ್ರಪಂಚದ ಜನರು ಈ ಘಟನೆಗೆ ಸಾಕ್ಷಿಯಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ ಭಗವಾನ್ ರಾಮನ ರೀತಿಯ ಸಂಕಲ್ಪವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಶ್ರೀರಾಮ ಬೋಧಿಸಿದ ಕರ್ತವ್ಯ ಬಲದ ಆಶಯದಂತೆ ಸಂಸತ್ ಎದುರು ಕರ್ತವ್ಯ ಪಥ ನಿರ್ವಿುಸಿರುವುದಾಗಿ ಹೇಳಿದರು. ಪ್ರಯಾಗರಾಜ್​ನಲ್ಲಿ ಶೀಘ್ರದಲ್ಲೇ 51 ಅಡಿ ಎತ್ತರದ ಭಗವಾನ್ ಶ್ರೀರಾಮ ಮತ್ತು ನಿಷಧ ರಾಜ ಗುಹನ ಪ್ರತಿಮೆ ನಿರ್ವಿುಸುವುದಾಗಿ ಮೋದಿ ಘೋಷಿಸಿದರು. ಅಯೋಧ್ಯೆಗೆ ಆಗಮಿಸಿದ ಪ್ರಧಾನಿ ಅವರನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ , ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಬರಮಾಡಿಕೊಂಡರು.
ತ್ರೇತಾಯುಗದ ಮರುಸೃಷ್ಟಿ:ಅಯೋಧ್ಯೆಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ , ಭರತ, ಶತ್ರುಘ್ಞ, ಹನುಮಂತನ ಪ್ರತಿಮೆಗಳನ್ನು ನಿರ್ವಿುಸಿ ಅದರ ವಿವರಣೆ ನೀಡಲಾಗಿದೆ. ಯುವಜನರಿಗೆ ರಾಮಾಯಣದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಗ್ರಾಫಿಕ್ ರೂಪದಲ್ಲಿ ಶ್ರೀರಾಮ ಲಂಕೆಯಿಂದ ಆಯೋಧ್ಯೆಗೆ ಪುಷ್ಪಕ ವಿಮಾನದಲ್ಲಿ ಬಂದಿಳಿದ ಸನ್ನಿವೇಶವನ್ನು ರೂಪಿಸಲಾಗಿದೆ. ಉಳಿದಂತೆ ರಾಮಾಯಣದ ಸನ್ನಿವೇಶಗಳನ್ನು ಪ್ರಸ್ತುತಪಡಿಸುವ 16 ಟ್ಯಾಬ್ಲೋಗಳಿದ್ದವು. ಈ ಪೈಕಿ 5 ಟ್ಯಾಬ್ಲೋಗಳಲ್ಲಿ ಅನಿಮೇಷನ್ ಪ್ರಸ್ತುತಿ ಇತ್ತು.
ಮಗಳು ಅವೆಲ್ಲ ಅರ್ಥವಾಗದಷ್ಟು ಚಿಕ್ಕವಳು: ಕೊಹ್ಲಿ ಆಟಕ್ಕೆ ಸಂಭ್ರಮಿಸಿ ಅನುಷ್ಕಾ ಪ್ರತಿಕ್ರಿಯಿಸಿದ್ದು ಹೀಗೆ..

‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − sixteen =
Remember me
