ನವದೆಹಲಿ:ಭಾರತದಲ್ಲಿ ಕರೊನಾ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿದೆ. ಸದ್ಯ 2902 ಮಂದಿ ಸೋಂಕಿತರು ಇದ್ದಾರೆ. ಅದಲ್ಲದೆ ಬೇರೆ ಕೆಲವು ದೇಶಗಳಲ್ಲಿರುವ ಭಾರತೀಯರೂ ಸಹ ಕರೊನಾಕ್ಕೆ ಬಲಿಯಾಗಿದ್ದಾರೆ.
ಅಮೆರಿಕ, ಇಟಲಿ, ಯುಎಇ(ಸಂಯುಕ್ತ ಅರಬ್​ ರಾಷ್ಟ್ರ) ಇರಾನ್​ ಹಾಗೂ ಈಜಿಪ್ಟ್​ನಿಂದ ಒಟ್ಟು 15 ಮಂದಿ ಭಾರತೀಯರು ಕರೊನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ಅಮೆರಿಕದಲ್ಲಿಯೇ ಹೆಚ್ಚು ಅಂದರೆ ಆರು ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಉಳಿದಂತೆ ಇಟಲಿಯಲ್ಲಿ ಐವರು, ಯುಎಇನಲ್ಲಿ ಇಬ್ಬರು, ಇರಾನ್​ ಹಾಗೂ ಈಜಿಪ್ಟ್​ನಿಂದ ತಲಾ ಒಬ್ಬರನ್ನು ಕರೊನಾ ಬಲಿಪಡೆದಿದೆ. ಇರಾನ್​ನ ಕೋಮ್​ನಗರದಲ್ಲಿ ಅತಿ ಹೆಚ್ಚು ಮಂದಿ ಭಾರತೀಯರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.
ಭಾರತ ಇದುವರೆಗೆ ಚೀನಾ, ಜಪಾನ್​, ಇರಾನ್​ ಮತ್ತು ಇಟಲಿಯಲ್ಲಿ ಸಿಲುಕಿ, ಕರೊನಾ ಭಯದಲ್ಲಿದ್ದ 2500 ಜನರನ್ನು ವಾಪಸ್​ ಕರೆದುಕೊಂಡು ಬಂದಿದೆ. ಕಳೆದ ವಾರ ಜಗತ್ತಿನ ವಿವಿಧ ದೇಶಗಳಲ್ಲಿರುವ ಭಾರತದ ರಾಯಭಾರಿಗಳ ಬಳಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದ್ದರು. ಆಯಾ ದೇಶಗಳಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
