ಲಖನೌ:ವಿಶ್ವದಲ್ಲೇ ಅತಿದೊಡ್ಡ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರ ಪ್ರದೇಶ ಪೊಲೀಸ್​, ಇತ್ತೀಚೆಗಷ್ಟೇ ತಮ್ಮಲಿರುವ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ದಾಖಲೆಯಂತೆ 15 ಲಕ್ಷ ಮಹಿಳೆಯರು ಖಾಕಿ ತೊಡಲು ನಿರ್ಧರಿಸಿ, ಅರ್ಜಿ ಸಲ್ಲಿಸಿದ್ದು, ಅವರ ಪೈಕಿ 12,000 ಮಂದಿ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಮಹಿಳಾ ಅಧಿಕಾರಿಗಳ ಸಂಖ್ಯೆ 50,000ಕ್ಕೆ ಏರಲಿದೆ. ಯುಪಿ ಪೊಲೀಸ್‌ನಲ್ಲಿ ಶೇ. 20ರಷ್ಟು ಮಹಿಳಾ ಪ್ರಾತಿನಿಧ್ಯದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ನೇಮಕಾತಿ ಅಭಿಯಾನವು ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿ:ಟರ್ಬೋ ಜನರೇಟರ್​ಗಳಿಂದ ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ
ಪ್ರಸ್ತುತ, ರಾಜ್ಯ ಪೊಲೀಸ್‌ನಲ್ಲಿ ಸುಮಾರು 37 ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿ 35,000 ಮಂದಿ ಸಿವಿಲ್ ಪೊಲೀಸ್ ಫೋರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆಯು ಯುಪಿ ಪೊಲೀಸ್‌ನಲ್ಲಿ ಮಹಿಳೆಯರ ಪ್ರಮಾಣವನ್ನು ಪ್ರಸ್ತುತ 12%ರಿಂದ 15%ಗೆ ಹೆಚ್ಚಿಸುವ ನಿರೀಕ್ಷೆಯಿದೆ.
ಕಾನ್ಸ್ಟೇಬಲ್ ಹುದ್ದೆಗಳಿಗೆ ಹೆಚ್ಚಾಯ್ತು ಬೇಡಿಕೆ:
ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿಯು ಕಾನ್‌ಸ್ಟೆಬಲ್‌ಗಳ ನೇರ ನೇಮಕಾತಿಗಾಗಿ ಸುಮಾರು 48 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ. ಅವುಗಳಲ್ಲಿ 15 ಲಕ್ಷ ಮಹಿಳೆಯರದ್ದು, ಇನ್ನುಳಿದ ಅರ್ಜಿಗಳು ಪುರುಷರದ್ದು. ಇದೇ ಪ್ರಥಮ ಬಾರಿಗೆ ದಾಖಲೆ ಮಟ್ಟದಲ್ಲಿ ಮಹಿಳೆಯರು ಪೊಲೀಸ್ ಪಡೆಗೆ ಸೇರಲು ಆಸಕ್ತಿ ತೋರಿದ್ದಾರೆ ಎಂದು ಯುಪಿ ಪೊಲೀಸ್ ಇಲಾಖೆ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).
ಹಣ್ಣು ಮಾರುತ್ತಿದ್ದವರ ಮಗ ಹುಟ್ಟುಹಾಕಿದ್ದು ಅತೀ ದೊಡ್ಡ ಸಂಸ್ಥೆ! ಹೆಸರು, ಹಣವಿದ್ದರೂ ಕಂಡಿದ್ದು ಮಾತ್ರ ದುರಂತ ಅಂತ್ಯ

ಈ ರೈಲ್ವೆ ಹಳಿ ಮೇಲೆ ಕಳೆದುಹೋಗಿರುವ ಏರ್​ಪೋಡ್​ ಹುಡುಕಿಕೊಟ್ಟವರು ನಿಜಕ್ಕೂ ಗ್ರೇಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − sixteen =
Remember me
