ಮುಂಬೈ:ಆಂಧ್ರ ಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದ ವಿಷಾನಿಲ ದುರಂತ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ಘನ ಘೋರ ದುರಂತ ನಡೆದಿದೆ. ಮಹಾರಾಷ್ಟ್ರದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 15 ಮಂದಿ ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ.
ಇಂದು (ಶುಕ್ರವಾರ) ಬೆಳಗ್ಗೆ ಔರಂಗಬಾದ್​​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಮೇಲೆ ಕಾರ್ಗೋ ಗೂಡ್ಸ್​ ರೈಲು ಹರಿದು ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:VIDEO| ಭಾರತದಲ್ಲಿ ಪತ್ತೆಯಾಯ್ತು ಎರಡು ತಲೆ: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತಿರಾ…!
ರೈಲು ಹಳಿಗಳ ಮೇಲೆ ನಡೆದು ಹೋಗುತ್ತಿದ್ದ ಕಾರ್ಮಿಕರು ಮಹಾರಾಷ್ಟ್ರದ ಕಾರ್ಮಾಡ್​ ಬಳಿ ರೈಲು ಹಳಿಗಳ ಮೇಲೆ ಮಲಗಿದ್ದರು. ಇಂದು ಬೆಳಗ್ಗೆ 5:15ರ ಸುಮಾರಿಗೆ ಮಲಗಿದ್ದವರ ಮೇಲೆ ರೈಲು ಹರಿದಿದೆ. ಘಟನೆ ನಡೆದ ಸ್ಥಳಕ್ಕೂ ಮುಂಬೈಗೂ 360 ಕಿ.ಮೀ ಅಂತರವಿದೆ.
ವಲಸೆ ಕಾರ್ಮಿಕರಲ್ಲಿ ತುಂಬಾ ತುರ್ತಿನ ಅವಶ್ಯ ಇರುವವರಿಗಾಗಿಯೇ ಅನೇಕ ರಾಜ್ಯಗಳು ವಿಶೇಷ ಶ್ರಮಿಕ್​ ಎಕ್ಸ್​ಪ್ರೆಸ್ ರೈಲಿನ ಮೂಲಕ ತವರಿಗೆ ಕರೆಸಿಕೊಳ್ಳುತ್ತಿವೆ.​ ಆದರೆ, ಕೆಲವರು ಕಾಲ್ನಡಿಗೆಯಲ್ಲೇ ತವರಿಗೆ ಮರಳುವ ನಿರ್ಧಾರ ಮಾಡಿ ಅನೇಕ ದಿನಗಳಿಂದ ನಡೆದುಕೊಂಡೇ ಸಾಗುತ್ತಿದ್ದಾರೆ.
ಇದನ್ನೂ ಓದಿ:ಸಕ್ಕರೆ ನಾಡಿನ ಜನರೇ ಹುಷಾರು… ಇಲ್ಲದಿದ್ರೆ ಬೆಲೆ ತೆರಬೇಕಾದೀತು…!
ಇನ್ನು ಘಟನಾ ಸ್ಥಳಕ್ಕೆ ರೈಲ್ವೆ ರಕ್ಷಣಾ ಪಡೆ ಮತ್ತು ಪೊಲೀಸ್​ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದೆ ಎಂದು ಸೌಥ್​ ಸೆಂಟ್ರಲ್​ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಸಾ.ರಾ. ಗೋವಿಂದುಗೆ ನಿಂದಿಸಿದ ಆರೋಪ: ನಟ ಜೈಜಗದೀಶ್​ ನೀಡಿದ ಸ್ಪಷ್ಟನೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nine =
Remember me
