ನವದೆಹಲಿ: ಬಹುನಿರೀಕ್ಷಿತ ರಾಮ ಮಂದಿರ ಟ್ರಸ್ಟ್​ ರಚನೆಯ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ, ರಾಮ ಮಂದಿರ ಟ್ರಸ್ಟ್​ನ ಸ್ವರೂಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಹಿರಂಗಪಡಿಸಿದ್ದಾರೆ.ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಎಂಬ ಹೆಸರಿನಲ್ಲಿ ಟ್ರಸ್ಟ್ ರಚನೆಯಾಗುತ್ತಿದ್ದು, ಇದರಲ್ಲಿ 15 ವಿಶ್ವಸ್ಥರಿರುತ್ತಾರೆ. ಇವರಲ್ಲಿ ಒಬ್ಬರು ದಲಿತ ಸಮುದಾಯದವರಾಗಿರುತ್ತಾರೆ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯ ತೆಗೆದುಕೊಳ್ಳಲು ಈ ಟ್ರಸ್ಟ್ ಸ್ವತಂತ್ರವಾಗಿರುತ್ತದೆ. 67 ಎಕರೆ ಭೂಮಿ ಕೂಡ ಟ್ರಸ್ಟ್​ ಹೆಸರಿನಲ್ಲೇ ಇರುತ್ತದೆ. ಈ ಮೂಲಕ ದೇಶದ ಲಕ್ಷಾಂತರ ಜನರ ಆಶಯದಂತೆ ರಾಮ ಜನ್ಮಭೂಮಿಯಲ್ಲೆ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಷಾ ಹೇಳಿದ್ದಾರೆ.ಟ್ರಸ್ಟ್ ರಚನೆಯ ನಿರ್ಣಯವನ್ನು ತೆಗೆದುಕೊಂಡ ಪ್ರಧಾನಿಯವರನ್ನು ಅಭಿನಂದಿಸಿದ ಷಾ, ಇದು ಇಡೀ ದೇಶ ಹೆಮ್ಮೆ ಪಡುವ ಮತ್ತು ಸಂಭ್ರಮಿಸುವ ದಿನ ಎಂದು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nine =
Remember me
