ಲಖನೌ:ತಾವು ಕೇಳಿದ್ದಷ್ಟು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಉದ್ಯಮಿಯೊಬ್ಬರ ಮಗನನ್ನು ದುಷ್ಕರ್ಮಿಗಳು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಇನ್ನುಳಿದಿರುವವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಬಾಲಕನ ಶವ ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ದೊರಕಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಟ್ರಾನ್ಸ್​ಪೋರ್ಟ್​ ಸಂಸ್ಥೆಯ ಮಾಲೀಕರಾಗಿರುವ ಪುಷ್ಪರಾಜ್​ ಕೇಸರವಾಣಿ ಎಂಬುವರ ಬಳಿ ಕೆಲಸ ಮಾಡುತ್ತಿದ್ದವರೇ ಈ ಕೃತ್ಯ ಎಸಗಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಆರೋಪಿಗಳು ಸಂತ್ರಸ್ತರ ಬಳಿ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಏಷ್ಯನ್​ ಗೇಮ್ಸ್​; ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಭಾರತದ ಶೂಟರ್​ಗಳು
ಶನಿವಾರ ಸಂಜೆ 4 ಘಂಟೆವರೆಗೂ ಬಾಲಕ ತನ್ನ ತಂದೆಯೊಂದಿಗೆ ಆಫೀಸ್​ನಲ್ಲಿದ್ದ ಆ ನಂತರ ಕಾಣೆಯಾಗಿದ್ದರು. ಈ ಸಂಬಂಧ ಆತನ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶನಿವಾರ ರಾತ್ರಿ 9 ಘಂಟೆ ಸುಮಾರಿಗೆ ಪುಷ್ಪರಾಜ್​ ಕೇಸರವಾಣಿ ಅವರಿಗೆ ಕರೆ ಮಾಡಿರುವ ಆರೋಪಿಗಳು ತಮ್ಮ ಮಗನನ್ನು ಅಪಹರಿಸಿದ್ದು, 15 ಲಕ್ಷ ಹಣ ಕೊಡುವಂತೆ ಹೇಳಿದ್ದಾರೆ. ಒಂದು ವೇಳೆ ತಾವು ಹೇಳಿದ ಕೆಲಸ ಮಾಡಲಿಲ್ಲವೆಂದರೆ ಮಗನನ್ನು ಕೊಲ್ಲುವುದಾಗಿ ತಿಳಿಸಿದ್ದರು.
ಹೇಳಿದ ಸಮಯಕ್ಕೆ ಹಣ ತಲುಪಿದ ಕಾರಣ ಸಿಟ್ಟಿಗೆದ್ದ ಆರೋಪಿಗಳು ಬಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ಧಾರೆ. ಬಳಿಕ ಶವವನ್ನು ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ. ಆರೋಪಿಗಳು ಚಿತ್ರಕೂಟ ಅರಣ್ಯ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಪೊಲಿಸರು ಹಾಗು ಅಪಹರಣಕಾರರ ನಡುವೆ ಗುಂಡಿನ ಚಕಮಕಿಯಾಗಿದ್ದು ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
