ಶಿಮ್ಲಾ:ಚಿಪ್ಸ್ ಪ್ಯಾಕೆಟ್ ಕದಿಯುವಾಗ ಸಿಕ್ಕಿಬಿದ್ದ ಅಪ್ರಾಪ್ತ ಬಾಲಕನಿಗೆ ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ನಾಚಿಕೆಗೇಡಿನ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ:ಕುತ್ತಿಗೆ ಕಚ್ಚಿ ರಕ್ತ ಕುಡಿಯಲು ಮುಂದಾದ ಯುವಕ: ರಕ್ತಪಿಪಾಸುವಿನ ಜೀವ ತೆಗೆದ ಸ್ನೇಹಿತಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಪೊಲೀಸರು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 341, 323 ಮತ್ತು 75 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.2023ರ ಜುಲೈ 31ರಂದು, ಶಿಮ್ಲಾ ಎಚ್‌ಪಿಯ ಸಿಹಿ ಅಂಗಡಿಯ ಮಾಲೀಕ ರಾಹುಲ್ ಸೋನಿ ಎಂಬಾತ 15 ವರ್ಷದ ಮಗನ ದಾರಿಯನ್ನು ತಡೆದು ಎಲ್ಲ ಜನರ ಮುಂದೆ ಥಳಿಸಿ ವಿವಸ್ತ್ರಗೊಳಿಸಿ ಕಣ್ಣಿಗೆ ಮೆಣಸಿನ ಪುಡಿ ಎಸೆದಿದ್ದಾನೆ ಎಂದು ಬಾಲಕನ ತಂದೆ ಹೇಳಿದ್ದಾರೆ.ಬಾಲಕನು ಹತ್ತು ರೂಪಾಯಿ ಮೌಲ್ಯದ ಚಿಪ್ಸ್ ಪ್ಯಾಕೆಟ್​​ನ್ನು ಕದ್ದಿದ್ದಕ್ಕಾಗಿ ಮಗುವಿಗೆ ಈ ಅಮಾನವೀಯ ಶಿಕ್ಷೆ ವಿಧಿಸಲಾಗಿದ್ದು, ಘಟನೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಪ್ರಯತ್ನಿಸಲಾಗಿತ್ತು. ಆದರೆ ಈ ವೀಡಿಯೋ ವೈರಲ್ ಆದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಪತಿ ಲಂಚ ಪಡೆದಿದ್ದಕ್ಕೆ ಮೇಯರ್ ಸ್ಥಾನದಿಂದ ಪತ್ನಿ ವಜಾ..ಘಟನೆ ಕುರಿತಾಗಿ ಮಾತನಾಡಿದ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ರೋಹ್ರು ಮಗುವಿನೊಂದಿಗೆ ಅಸಹ್ಯಕರ ಕೃತ್ಯವು ಮಾನವೀಯತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ, ಇದು ನಮ್ಮ ಸಂಪ್ರದಾಯವಲ್ಲ. ಪೊಲೀಸ್ ಠಾಣೆ ಘಟನಾ ಸ್ಥಳದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿದೆ, ಆರೋಪಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
