ತೋಡುಪುಳ:ಪ್ರೀತಿಗೆ ಮನೆಯವರು ಒಪ್ಪಿಕೊಳ್ಳದಿದ್ದಕ್ಕೆ ಒಂದೇ ಹುಡುಗನ ಜೊತೆ ಅಪ್ರಾಪ್ತೆಯೊಬ್ಬರು ಮೂರು ಬಾರಿ ಓಡಿ ಹೋದ ಘಟನೆ ಕೇರಳದ ತೋಡುಪುಳದಲ್ಲಿ ನಡೆದಿದೆ.
14 ವರ್ಷದ ಮುಲ್ಲಮಟ್ಟಂ ಮೂಲದ ಬಾಲಕಿ, ಹುಡುಗನೊಂದಿಗೆ ಮತ್ತೆ ನಾಪತ್ತೆಯಾಗಿದ್ದಾಳೆ. ಪದೇಪದೆ ಈ ಘಟನೆ ನಡೆಯುತ್ತಿರುವುದು ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ತಲೆನೋವು ತಂದಿದೆ.
ಇದನ್ನೂ ಓದಿ:ಕ್ಲೈಮ್ಯಾಕ್ಸ್ ತಲುಪಿದ ಜೆಡಿಎಸ್ ಬಿಕ್ಕಟ್ಟು: ಇಂದು ನಿರ್ಧಾರ ಘೋಷಣೆ ಅನಿವಾರ್ಯ
ಈ ಹಿಂದೆ ಬಾಲಕಿ ತನ್ನ ಇಬ್ಬರು ಅಕ್ಕಂದಿರು ಮತ್ತು ಪಾಲಕರೊಂದಿಗೆ ಅಯವನದಲ್ಲಿ ನೆಲೆಸಿದ್ದಳು. ಒಂದು ದಿನ ದಿಢೀರನೇ ಆಕೆ ಕಾಣೆಯಾದಳು. ಬಳಿಕ ಪಾಲಕರು ಸಮೀಪದ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಹುಡುಕಾಟ ನಡೆಸಿ ಕೆಲವು ದಿನಗಳ ನಂತರ ಮುವಾಟ್ಟುಪುಳದ 15 ವರ್ಷದ ಹುಡುಗನೊಂದಿಗೆ ಹುಡುಗಿ ಇರುವುದನ್ನು ಪತ್ತೆಹಚ್ಚಿದರು. ಬಳಿಕ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಾಲಕರಿಗೆ ಒಪ್ಪಿಸಲಾಯಿತು.
ಈ ಘಟನೆಯ ಬಳಿಕ ಹುಡುಗಿಯ ಪಾಲಕರು ತಮ್ಮ ಮನೆಯನ್ನು ಮುಲ್ಲಮಟ್ಟಂಗೆ ಅನಿವಾರ್ಯವಾಗಿ ಸ್ಥಳಾಂತರಿಸಬೇಕಾಯಿತು. ಆದರೆ, ಬಾಲಕಿ ಮತ್ತೆ ನಾಪತ್ತೆಯಾಗಿ, ಮತ್ತೊಮ್ಮೆ ಹುಡುಕಿಕೊಂಡು ಬರಲಾಗಿತ್ತು. ಇದೀಗ ಮೂರನೇ ಬಾರಿಗೆ ಹುಡುಗಿ ಅದೇ ಹುಡುಗನೊಂದಿಗೆ ಪರಾರಿಯಾಗಿದ್ದಾಳೆ. ಆರೋಪಿ ಹುಡುಗ ಆಕೆಗೆ ನಿತ್ಯವು ಫೋನ್ ಮಾಡುವ ಮೂಲಕ ತೊಂದರೆ ಕೊಡುತ್ತಿದ್ದ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ
ಆದರೆ, ಈ ಬಾರಿ ಬಾಲಕಿ ತಂದೆಯ ಫೋನ್​ ಜೊತೆಗೆ ಕೆಲ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಇದೀಗ ಮತ್ತೆ ದೂರು ದಾಖಲಾಗಿದ್ದು, ಮತ್ತೊಮ್ಮೆ ಹುಡುಕಾಟ ಆರಂಭಿಸಿದ್ದಾರೆ. ಹುಡುಗ-ಹುಡುಗಿ ಇಬ್ಬರು ಅಪ್ರಾಪ್ತರಾಗಿದ್ದು, ಪತ್ತೆಯಾದ ಕೂಡಲೇ ಇಬ್ಬರನ್ನು ಸಮಾಲೋಚನೆ ಒಳಪಡಿಸಲು ಪಾಲಕರನ್ನು ಪರಿ ಪರಿಯಾಗಿ ಪೊಲೀಸರು ಬೇಡಿಕೊಂಡಿದ್ದಾರೆ.(ಏಜೆನ್ಸೀಸ್​)
ಅಗತ್ಯ ಸೇವೆಯಡಿ ಬರುವ ಗೈರು ಹಾಜರಿ ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ ದಿನಾಂಕ ನಿಗದಿ

ಸಮಸಮಾಜ ನಿರ್ಮಾಣಕ್ಕೆ ಬಸವಣ್ಣ ಕಾರಣ: ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅಭಿಮತ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
